ದುಬೈ, ಏ 30 (Daijiworld News/MSP): ಕಳೆದ ವಾರ ದುಬೈನಲ್ಲಿ ಮೃತಪಟ್ಟ ಭಾರತೀಯ ಉದ್ಯಮಿ ಜಾಯ್ ಅರಕ್ಕಲ್ ಸಾವು ಆತ್ಮಹತ್ಯೆಯಿಂದ ಸಂಭವಿಸಿದೆ ಎಂದು ದುಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಜಾಯ್ ಅರಕ್ಕಲ್ ಏ. 23 ರಂದು ಬ್ಯುಸಿನೆಲ್ ಬೇ ಕಟ್ಟಡದ 14 ನೇ ಪ್ಲೋರ್ ನಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬುಲ್ ದುಬೈ ಪೊಲೀಸ್ ಠಾಣೆಯ ಬ್ರಿಗೇಡಿಯರ್ ಅಬ್ದುಲ್ ಖಾದಿಮ್ ಬಿನ್ ಸೊರೌರ್ ತಿಳಿಸಿದ್ದಾರೆ.
ಸಿಗರೇಟ್ ಸೇದಲು ಹೊರಗೆ ಉದ್ಯಮಿ ಸಾವನ್ನಪ್ಪಿದ್ದರು. ತಕ್ಷಣ ಈ ಬಗ್ಗೆ ಆತನ ಕುಟುಂಬ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿತ್ತು. "ತನಿಖೆಗಳು ಮುಗಿದಿದ್ದು ಅವರ ಸಾವು ಆತ್ಮಹತ್ಯೆಯಿಂದ ಸಂಭವಿಸಿದೆ. ಅವರ ದೇಹವನ್ನು ಭಾರತಕ್ಕೆ ಕಳುಹಿಸಲಾಗುವುದು" ಎಂದು ಅವರು ‘ಖಲೀಜ್ ಟೈಮ್ಸ್’ಗೆ ಬ್ರಿಗೇಡಿಯರ್ ಅಬ್ದುಲ್ ತಿಳಿಸಿದ್ದಾರೆ. ಯುಎಇಯ ‘ಗೋಲ್ಡ್ ಕಾರ್ಡ್’ ವೀಸಾ ಹೊಂದಿದ್ದ ಅವರು ಆರ್ಥಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಆತ್ಮಹತ್ಯೆ2019 ರಲ್ಲಿ ಯುಎಇ ಸರ್ಕಾರ ಜಾಯ್ ಅರಕ್ಕಲ್ ಭಾರತೀಯ ಉದ್ಯಮಿ ಅವಾರ್ಡ್ ನೀಡಿ 10 ವರ್ಷದ ಗೋಲ್ಡ್ ಕಾರ್ಡ್ ನೀಡಿ ಗೌರವಿಸಿತ್ತು.
ಕೇಂದ್ರ ಗೃಹಸಚಿವಾಲಯ ಒದಗಿಸಿರುವ ಏರ್ ಅಂಬ್ಯುಲೆನ್ಸ್ ನಲ್ಲಿ ಮೃತದೇಹದ ಜೊತೆಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಹೀಗೆ ಮೂವರು ಕುಟುಂಬದ ಸದಸ್ಯರನ್ನು ಕೇರಳಕ್ಕೆ ಕರೆತರಲಾಗುತ್ತದೆ. ಬಳಿಕ ಕೊಯಿಕ್ಕೋಡ್ ನಲ್ಲಿ ಅರಕ್ಕಾಲ್ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.