ಅಮೆರಿಕಾ, ಏ 30 (Daijiworld News/MSP): ಭಾರತೀಯ ಮೂಲದ 5 ತಿಂಗಳ ಗರ್ಭಿಣಿ ಕೊಲೆಯಾದ ಸ್ಥಿತಿಯಲ್ಲಿ ಆಕೆಯ ಮನೆಯಲ್ಲಿ ಪತ್ತೆಯಾದ್ರೆ , ಆಕೆಯ ಪತಿ ಅದೇ ನಗರದ ನದಿ ತಟದಲ್ಲಿ ಆತ್ಮಹತ್ಯೆಗೈದಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಅಮೇರಿಕಾದಲ್ಲಿ ನಡೆದಿದೆ.
ಭಾರತ ಮೂಲದ ದಂಪತಿ ಮೃತಪಟ್ಟಿದ್ದು, ಮೃತರನ್ನು ಮೋಹನ್ ಮಾಲ್ (37) ಮತ್ತು ಗರಿಮಾ ಕೊಠಾರಿ (35) ಎಂದು ಗುರುತಿಸಲಾಗಿದೆ. ಗರ್ಭಿಣಿಯಾಗಿರುವ ಗರಿಮಾ ಕೊಠಾರಿಯ ಮೃತದೇಹ ಆಕೆಯ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದ್ದು, ಆಕೆಯ ಪತಿ ಮೋಹನ್ ಮಾಲ್ ಶವ ಹಡ್ಸನ್ ನದಿಯ ದಡದಲ್ಲಿ ಪೊಲೀಸರಿಗೆ ಸಿಕ್ಕಿದೆ,
ಗರಿಮಾ ಅವರ ದೇಹದ ಮೇಲ್ಭಾಗದಲ್ಲಿ ಚಾಕುವಿನಿಂದ ಹಲವಾರು ಬಾರಿ ಇರಿದ ಗಾಯದ ಗುರುತುಗಳಿವೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, ಏಪ್ರಿಲ್ 26 ರಂದು ಇಬ್ಬರ ಶವಗಳು ಪತ್ತೆಯಾಗಿವೆ ಎಂದು ಜೆರ್ಸಿ ಪೊಲೀಸರು ತಿಳಿಸಿದ್ದಾರೆ. ಪತಿಯೇ ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಮೋಹನ್ ಜೆರ್ಸಿ ಅವರ ಶವ ಹಡ್ಸನ್ ನದಿಯಲ್ಲಿ ಪತ್ತೆಯಾಗಿದೆ.
ವಿದ್ಯಾಭ್ಯಾಸದ ಸಂಬಂಧ ಅಮೆರಿಕಗೆ ಬಂದಿದ್ದ ಗರಿಮಾ ಕೊಠಾರಿ ಮತ್ತು ಮೋಹನ್ ಮಾಲ್ ಇಬ್ಬರು ಅಮೆರಿಕಾದಲ್ಲಿ ನುಕ್ಕಡ್ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದರು. ಗರಿಮಾ ಒಳ್ಳೆಯ ಶೇಫ್ ಆಗಿದ್ದರು. ಇಬ್ಬರ ನಡುವೆ ಯಾವುದೇ ಮನಸ್ತಾಪವಿರಲಿಲ್ಲ ಇಬ್ಬರು ಅನ್ಯೋನ್ಯವಾಗಿದ್ದರು ಎಂದು ಹೊಟೆಲ್ ಸಿಬ್ಬಂದಿ ತಿಳಿಸಿದ್ದಾರೆ.