ಮಾಸ್ಕೊ, ಮೇ.01 (DaijiworldNews/PY) : ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗಾಗಿ ಸ್ವಯಂ ಐಸೋಲೇಷನ್ಗೆ ಒಳಪಡುವುದಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಅವರು ವಿಡಿಯೋ ಕರೆ ಮೂಲಕ ತಿಳಿಸಿದ್ದಾರೆ.
ಮಿಖಾಯಿಲ್ ಮಿಶುಸ್ಟಿನ್ (54) ಅವರು ಪ್ರಧಾನಿ ಹುದ್ದೆಯನ್ನು ಜನವರಿಯಲ್ಲಿ ಅಲಂಕರಿಸಿದ್ದರು. ಇದೀಗ ಸದ್ಯ, ಉಪ ಪ್ರಧಾನಿಯಾದ ಆಂಡ್ರೇ ಬೆಲೊಸೊವ್ ಅವರು ತಾತ್ಕಾಲಿಕವಾಗಿ ಮಿಖಾಯಿಲ್ ಅವರ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ. ಅದಾಗಿಯೂ, ಮುಖ್ಯವಾದ ವಿದ್ಯಾಮಾನಗಳ ಬಗ್ಗೆ ನಿಗಾ ವಹಿಸುವುದಾಗಿಯೂ ಮಿಖಾಯಿಲ್ ಹೇಳಿದ್ದಾರೆ.
ಕೊರೊನಾದಿಂದಾಗಿ ಸಂಕಷ್ಟಕ್ಕೀಡಾದ ರಷ್ಯಾದ ಆರ್ಥಿಕತೆಗೆ ಪುನಶ್ಚೇತನ ನೀಡಲು ನೀತಿಗಳನ್ನು ರೂಪಿಸುವಲ್ಲಿ ಮಿಖಾಯಿಲ್ ಮಿಶುಸ್ಟಿನ್ ಅವರು ಮುಂದುವರೆಯುವುದಾಗಿ ಭಾವಿಸಿದ್ದೇನೆ ಎಂದು ವಿಡಿಯೋ ಕರೆಯ ಸಂದರ್ಭ ಅಧ್ಯಕ್ಷ ಪುಟಿನ್ ತಿಳಿಸಿದ್ದಾರೆ.
ಇತ್ತೀಚೆಗೆ ಮಿಖಾಯಿಲ್ ಅವರು ಪುಟಿನ್ ಅವರನ್ನು ಭೇಟಿ ಮಾಡಿಲ್ಲ ಎನ್ನಲಾಗಿದೆ. ಕೊರೊನಾ ಪ್ರಾರಂಭವಾದ ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಹೆಚ್ಚಾಗಿ ಸಭೆಗಳನ್ನು ನಡೆಸುತ್ತಿದ್ದಾರೆ.