ವಾಷಿಂಗ್ಟನ್, ಮೇ 04 (Daijiworld News/MB) : ಕೊರೊನಾ ವೈರಸ್ ವುಹಾನ್ನ ವನ್ಯಜೀವಿ ಮಾಂಸ ಮಾರುಕಟ್ಟೆಯಲ್ಲಿ ಮೊದಲು ಹುಟ್ಟಿಕೊಂಡದಲ್ಲ, ಅದು ವುಹಾನ್ನ ಲ್ಯಾಬ್ನಿಂದ ಪಸರಿಸಿದೆ ಎಂದು ಅಮೆರಿಕದ ಅಧ್ಯಕ್ಷ ಈವರೆಗೆ ಮಾಡುತ್ತಿರುವ ವಾದವನ್ನು ಅಮೆರಿಕದ ಕಾರ್ಯದರ್ಶಿ ಮೈಕ್ ಪಾಂಪಿಯೊ ಬೆಂಬಲಿಸಿದ್ದು ಕೊರೊನಾ ವೈರಸ್ ಬಂದಿದ್ದು ಚೀನಾದ ವುಹಾನ್ನ ಪ್ರಯೋಗಾಲಯದಿಂದ ಎಂದು ಹೇಳಲು ನಮಲ್ಲಿ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಅಮೆರಿಕಾದ ದಿಸ್ ವೀಕ್ ಸುದ್ದಿವಾಹಿನಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಚೀನಾದ ವುಹಾನ್ನ ಬಂದಿದೆ ಎನ್ನಲು ಪುರಾವೆಯಿದೆ, ಆದರೆ ವೈರಸ್ ಅನ್ನು ಜೈವಿಕವಾಗಿ ಮಾರ್ಪಾಡು ಮಾಡಿರುವ ಬಗ್ಗೆ ಸಾಕ್ಷ್ಯಗಳಿಲ್ಲ ಎಂದು ತಿಳಿಸಿದ್ದಾರೆ.
ವೈರಸ್ ಹುಟ್ಟಿಕೊಂಡಿರುವ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಗುಪ್ತಚರ ಇಲಾಖೆ ಅಧಿಕಾರಿಗಳು ಆ ಬಗ್ಗೆ ವರದಿಗಳನ್ನು ವರ್ಗೀರಿಸಿದ್ದಾರೆ. ಕೊರೊನಾ ಸೋಂಕು ಇದ್ದ ಪ್ರಾಣಿಯೊಂದನ್ನು ಆ ಪ್ರಾಣಿಯೊಂದನ್ನು ನಾಶ ಮಾಡಿದ್ದು ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಲ್ಲಿದ್ದ ಹಲವರು ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿ ತಿಳಿಸಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಲಾಗುವುದು ಎಂದು ಹೇಳಿದ್ದಾರೆ.
ಈ ಮಧ್ಯೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಕೊರೊನಾ ವುಹಾನ್ ಲ್ಯಾಬ್ನಲ್ಲೇ ಹುಟ್ಟಿದ್ದು ಎಂದು ಪ್ರತಿಪಾದಿಸಿದ್ದು ಇದಕ್ಕೆ ಸಾಕ್ಷ್ಯ ಇದೆಯೇ ಎಂದು ಮಾಧ್ಯಮ ಪ್ರಶ್ನಿಸಿದಾಗ ಅದನ್ನು ನಾನು ಹೇಳುವಂತಿಲ್ಲ ಎಂದು ಹೇಳಿದರು.
ಇನ್ನು ಚೀನಾ ತನ್ನ ಮೇಲೆ ಅಮೆರಿಕಾ ಮಾಡಿದ ಆರೋಪಕ್ಕೆ ಕಿರು ಚಿತ್ರದ ಮೂಲಕ ತಿರುಗೇಟು ನೀಡಿದೆ.