ನ್ಯೂಯರ್ಕ್, ಮೇ 5 (Daijiworld News/MSP): ವಿಶ್ವ ಆರೋಗ್ಯ ಸಂಸ್ಥೆ ಮತ್ತೊಮ್ಮೆ ಚೀನಾ ಪರ ಬ್ಯಾಟ್ ಬೀಸಿದ್ದು, ಕೊರೊನಾ ವೈರಸ್ ಚೀನಾದ ಸೃಷ್ಟಿ ಎನ್ನುವ ಅಮೇರಿಕಾದ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಹೇಳಿದೆ.
ಕೊರೊನಾ ವೈರಸ್ ಗೆ ಚೀನಾ ಸೃಷ್ಟಿ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಊಹಾತ್ಮಕ ಆರೋಪವಾಗಿದೆ. ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಅಮೇರಿಕಾ ಆರೋಪಿಸಿದಂತೆ ವೈರಸ್ ವುಹಾನ್ ಪ್ರಯೋಗಾಲಯದಲ್ಲೇ ಸೃಷ್ಟಿಯಾಗಿದ್ದು ಎಂದು ಹೇಳುತ್ತಾ ಬಂದಿದೆ ವಿನಾಃ ಅಮೆರಿಕ ಇಲ್ಲಿಯತನಕ ಯಾವುದೇ ದಾಖಲೆಗಳನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕಾ ಹೇಳುತ್ತಿರಿವ ಕೊರೋನಾ ಜನ್ಮ ರಹಸ್ಯ ಈ ವರೆಗೂ ಊಹಾತ್ಮಕವಾಗಿಯೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಅಗತ್ಯತೆಗಳ ವಿಭಾಗದ ನಿರ್ದೇಶಕ ಮೈಕಲ್ ರಿಯಾನ್ ಹೇಳಿದ್ದಾರೆ.
ಈ ಹೇಳಿಕೆ ಮೂಲಕ ಅಮೆರಿಕ-ವಿಶ್ವಸಂಸ್ಥೆ ನಡುವೆ ನಡೆಯುತ್ತಿದ್ದ ವಾಕ್ಸಮರ ಮತ್ತೊಂದು ಹಂತಕ್ಕೆ ತಲುಪಿದೆ. ಅಮೆರಿಕ ಅಧ್ಯಕ್ಷ ವೈರಸ್ ಚೀನಾದ ಸೃಷ್ಟಿ ಎಂದು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದು ಈ ಬಗ್ಗೆ ಅಮೆರಿಕ ಸರ್ಕಾರ ತನಿಖೆಯನ್ನೂ ಪ್ರಾರಂಭಿಸಿದ್ದಾಗಿಯೂ ಹೇಳಿದ್ದರು.