ವಾಷಿಂಗ್ಟನ್, ಮೇ 08 (DaijiworldNews/PY) : ಅಮೆರಿಕದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಒಂದೇ ದಿನದಲ್ಲಿ 2,448 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ ಸಾವನ್ನಪ್ಪಿದರ ಸಂಖ್ಯೆ 75ಸಾವಿರಕ್ಕೇರಿದ್ದು, ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಜಾನ್ಸ್ ಹಾಫ್ ಕಿನ್ಸ್ ಯುನಿವರ್ಸಿಟಿ ತಿಳಿಸಿದೆ.
ಸಾವಿನ ಪ್ರಮಾಣ ಜಗತ್ತಿನ ಇತರ ದೇಶಗಳಿಗಿಂತ ಅಮೆರಿಕದಲ್ಲೇ ಅಧಿಕವಾಗಿದ್ದು, ಏಕಾಏಕಿ ಸೋಂಕಿತರ ಪ್ರಮಾಣ ದ್ವಿಗುಣವಾಗಿದೆ ಎಂದು ವರದಿ ತಿಳಿಸಿದೆ.
ಈವರೆಗೆ ಸುಮಾರು 12ಲಕ್ಷಕ್ಕಿಂತ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದು, ನ್ಯೂಯಾರ್ಕ್ ನಗರವೊಂದರಲ್ಲೇ ಸುಮಾರು 26 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿತರ ಪ್ರಮಾಣವೂ ಇಲ್ಲಿ ಅಧಿಕವಿದ್ದು, ಈ ಮಾರಣಾಂತಿಕ ಸೋಂಕು ನ್ಯೂಜೆರ್ಸಿಯಲ್ಲೂ ಮುಂದುವರೆದಿದೆ.
ಕೊರೊನಾ ಸೋಂಕಿಗೆ ಜಗತ್ತಿನಾದ್ಯಂತ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 2,70,720 ದಾಟಿದ್ದು, ಈ ಸೋಂಕಿಗೆ 39 ಲಕ್ಷಕ್ಕಿಂತಲೂ ಅಧಿಕ ಜನರು ಬಳಲುತ್ತಿದ್ದಾರೆ. ಈ ಪೈಕಿ 13,44,120 ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.