ವಾಷಿಂಗ್ಟನ್ ಮೇ 19 (Daijiworld News/MSP): ಡಬ್ಲ್ಯುಎಚ್ಒಗೆ ನೀಡುತ್ತಿದ್ದ ಅನುದಾನ ಕಡಿತ ಖಚಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯನ್ನು ಚೀನಾದ 'ಕೈಗೊಂಬೆ' ಎಂದು ಟೀಕಿಸಿದ್ದಾರೆ.
ವಿಶ್ವದ ಯಾವುದೇ ರಾಷ್ಟ್ರ ನೀಡುವುದಕ್ಕಿಂತ ಹೆಚ್ಚಾಗಿ ಅಮೆರಿಕವು ಡಬ್ಲ್ಯುಎಚ್ಒಗೆ ವಾರ್ಷಿಕ ₹ 3.4 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಆದರೆ ಡಬ್ಲ್ಯುಎಚ್ಒ ಮಾತ್ರ ಚೀನಾದ ಅಡಿಯಾಳಾಗಿದ್ದು, ಅದರೂ ಅದು ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಚೀನಾ ಪರವಾಗಿ ಡಬ್ಲ್ಯುಎಚ್ಒ ಮಾತಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಡಬ್ಲ್ಯುಎಚ್ಒದವರು ನಮಗೆ ದಾರಿ ತಪ್ಪುವಂತಹ ಉಪದೇಶ ನೀಡಿದ್ದಾರೆ ,ಅನುದಾನ ಕಡಿತಗೊಳಿಸಲು ಯೋಜನೆ ರೂಪಿಸಲಾಗಿದೆ. ಕೋವಿಡ್-19 ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿದ ನಂತರ ಡಬ್ಲ್ಯುಎಚ್ಒ ತನ್ನ ಮೊದಲ ವಾರ್ಷಿಕ ಸಭೆ ನಡೆಸಿದೆ. ಸೋಂಕಿನಿಂದಾಗಿ ವಿಶ್ವದಾದ್ಯಂತ 3.16 ಲಕ್ಷ ಜನರು ಮೃತಪಟ್ಟಿದ್ದಾರೆ . ಹೀಗಾಗಿ ನಾವು ನೀಡುತ್ತಿದ್ದಅನುದಾನವನ್ನು ₹ 300 ಕೋಟಿಗೆ ಇಳಿಸುವ ಯೋಜನೆಯಲ್ಲಿದ್ದೇವೆ ಎಂದಿದ್ದಾರೆ.