ವಾಷಿಂಗ್ಟನ್, ಮೇ 21 (Daijiworld News/MB) : ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲ್ಲೇ ಇದ್ದು ಕೊರೊನಾ ಪ್ರಕರಣಗಳ ಸಂಖ್ಯೆ 50 ಲಕ್ಷದ ಗಡಿ ದಾಟಿದೆ ಎಂದು ವರದಿಯಾಗಿದೆ.
ಜಗತ್ತಿನಾದ್ಯಂತ ಒಟ್ಟು 5,090,642 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು 329,754 ಮಂದಿ ಈ ಸೋಂಕಿಗೆ ಬಲಿಯಾದರೆ 2,025,716 ಮಂದಿ ಗುಣಮುಖರಾಗಿದ್ದಾರೆ. 2,735,172 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿರುವ ಅಮೆರಿಕಾದಲ್ಲಿ 15,93,039 ಜನರಿಗೆ ಸೋಂಕು ತಗುಲಿದ್ದು 94,941 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ 11,27,286 ಜನರು ಚಿಕಿತ್ಸೆ ಪಡೆಯುತ್ತಿದ್ದು 3,70,812 ಮಂದಿ ಗುಣಮುಖರಾಗಿದ್ದಾರೆ.
ರಷ್ಯಾದಲ್ಲಿ ಈವರೆಗೆ 308,705 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ, 2,972 ಮಂದಿ ಮೃತಪಟ್ಟಿದ್ದಾರೆ. ಸ್ಪೇನ್ನಲ್ಲಿ ಸೋಂಕಿತರ ಸಂಖ್ಯೆ 2,32,555, ಬ್ರಿಟನ್ನಲ್ಲಿ 2,49,619, ಭಾರತದಲ್ಲಿ ಮೇ 20ರ ವೇಳೆಗೆ 1,12,359 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಈ ಸೋಂಕು ಮೊದಲು 2019ರ ಡಿಸೆಂಬರ್ನಲ್ಲಿ ಚೀನಾದ ವುಹಾನ್ ನಗರದಲ್ಲಿ ಕಂಡು ಬಂದಿದ್ದು ಇದೀಗ ವಿಶ್ವದಲ್ಲೇ ಆತಂಕಕ್ಕೆ ಕಾರಣವಾಗಿದೆ.