ಕರಾಚಿ, ಮೇ 22 (Daijiworld News/MSP): ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ವಿಮಾನವೊಂದು ಕರಾಚಿ ವಿಮಾನ ನಿಲ್ದಾಣದ ಬಳಿ ಮೇ22ರಂದು ಅಪಘಾತಕ್ಕೀಡಾಗಿದೆ ಎಂದು ಪಾಕಿಸ್ತಾನ ಮಾಧ್ಯಮವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ವಿಮಾನದಲ್ಲಿ 99 ಪ್ರಯಾಣಿಕರು ಮತ್ತು 8 ಸಿಬ್ಬಂದಿಗಳಿದ್ದರು ಎಂದು ಪಿಐಎ ವಕ್ತಾರರು ತಿಳಿಸಿದ್ದಾರೆ. ಪಾಕಿಸ್ತಾನದ ಇಂಟರ್ನ್ಯಾಷನಲ್ ಏರ್ ಲೈನ್ಸ್ ನ ಏರ್ ಬಸ್ ಏರ್ಬಸ್ ಎ 320 ಪಿಕೆ 8303 ದೇಶೀಯ ವಿಮಾನ ಕರಾಚಿ ವಿಮಾನ ನಿಲ್ದಾಣದ ಸಮೀಪದಲ್ಲಿ, ಮಾಲಿರ್ ಕಂಟೋನ್ಮೆಂಟ್, ಜಿನ್ನಾ ಗಾರ್ಡನ್ (ಮಾಡೆಲ್ ಕಾಲೋನಿ) ಬಳಿ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ
ಕರಾಚಿ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ವಿಮಾನವು ವಸತಿ ಪ್ರದೇಶದಲ್ಲಿ ಆಕಾಶದಲ್ಲಿ ದಟ್ಟ ಹೊಗೆ ಕಾಣಿಸುತ್ತಿರುವ ದೃಶ್ಯಗಳನ್ನು ಪಾಕಿಸ್ತಾನದ ಸುದ್ದಿ ವಾಹಿನಿಗಳು ವರದಿ ಮಾಡಿದೆ.