ದುಬೈ, ಮೇ 23 (Daijiworld News/MSP): ಕೊರೊನಾ ಸಂಕಷ್ಟ ಹಾಗೂ ಜಾಗತಿಕ ಆರ್ಥಿಕ ಕುಸಿತದಿಂದ ವಿಶ್ವದೆಲ್ಲೆಡೆ ಉದ್ಯೋಗ ಕಡಿತದ ಮಹಾಪರ್ವ ಪ್ರಾರಂಭವಾಗಿದ್ದು, ಇದು ಯುನೈಟೆಡ್ ಅರಬ್ ಎಮಿರೇಟ್ಸ್ನ ಬಿಟ್ಟಿಲ್ಲ. ಇದೇ ಮೊದಲ ಬಾರಿಗೆ ಅಮೇರಿಕಾದಲ್ಲಿ ಈಗಾಗಲೇ 33.5 ಮಿಲಿಯನ್ ಜನರ ಉದ್ಯೋಗ ಕಡಿತವಾಗಿದೆ.
ಇನ್ನು ಕೊಲ್ಲಿ ರಾಷ್ಟ್ರಗಳಲ್ಲಿ ಶೇ. 70 ರಷ್ಟು ಕಂಪನಿಗಳು ಕೊರೊನಾ ಸಂಕಷ್ಟದಿಂದ ಬೀಗಹಾಕಲು ಸಿದ್ದವಾಗಿದೆ ಎಂದು ವರದಿಯಾಗಿದೆ. ದುಬಾೖ ಚೇಂಬರ್ ಆಫ್ ಕಾಮರ್ಸ್ ನ ವಿವಿಧ ಕ್ಷೇತ್ರಗಳ ಸುಮಾರು 1,228ಕ್ಕೂ ಹೆಚ್ಚು ಸಿಇಒಗಳನ್ನು ಸಂದರ್ಶಿಸಿ ಮಾಡಿದ ಸಮೀಕ್ಷೆಯಂತೆ ಮೂರನೇ ಎರಡು ಭಾಗದಷ್ಟು ಉದ್ಯಮಗಳು ಮುಂಬರುವ ಆರು ತಿಂಗಳಲ್ಲಿ ಪರಿಪೂರ್ಣ ಮಟ್ಟದಲ್ಲಿ ತಮ್ಮ ವ್ಯವಹಾರಗಳು ಸಂಪೂರ್ಣ ನಿಂತು ಹೋಗುತ್ತದೆ ಎಂಬ ಆತಂಕವನ್ನು ಹೊರಹಾಕಿದ್ದಾರೆ
ಈ ಅಧ್ಯಯನ ವರದಿ ಪ್ರಕಾರ ಶೇ.27ರಷ್ಟು ಜನ ಇನ್ನೊಂದು ಮಾಸದೊಳಗೆ ತಮ್ಮ ವ್ಯಾಪಾರ ಉದ್ಯೋಗವನ್ನು ಕಳೆದುಕೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಾಕಿ ಉಳಿದ ಶೇ.43ರಷ್ಟು ಜನರು ಕೂಡಾ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ, ಶೇ.20ರಷ್ಟಕ್ಕಿಂತ ಕಡಿಮೆ ಮಟ್ಟದ ಉದ್ಯೋಗಿಗಳನ್ನು ಹೊಂದಿರುವ ಸಣ್ಣ ಉದ್ಯಮಗಳು ಇಂತಹದೇ ಕಳವಳನ್ನು ತೋರ್ಪಡಿಸಿ. ಆ ಮೂಲಕ ಬರುವ ಆರು ತಿಂಗಳ ಕಾಲಾವಧಿಯಲ್ಲಿ ತೈಲ ಸಮೃದ್ಧ ಯುನೈಟೆಡ್ ಅರಬ್ ಎಮಿರೇಟ್ಸ್ನ ಪ್ರಮುಖ ವಾಣಿಜ್ಯ ನಗರಗಳು ಶೇ.70ರಷ್ಟು ಉದ್ಯಮ ಸ್ಥಗಿತಕ್ಕೆ ಸಾಕ್ಷಿಯಾಗಲಿವೆ.