ಬೀಜಿಂಗ್, ಮೇ 27 (Daijiworld News/MB) : ಭಾರತ ಮತ್ತು ಚೀನಾ ಸೈನಿಕರ ನಡುವೆ ಗಡಿಯಲ್ಲಿ ಶೀಥಲ ಸಮರ ನಡೆಯುತ್ತಲ್ಲಿರುವ ಮಧ್ಯೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ತಮ್ಮ ಸೇನೆಗೆ ಯಾವುದೇ ಕಠಿಣ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಿ ಎಂದು ಸೂಚನೆ ನೀಡಿದ್ದಾರೆ.
ಮಂಗಳವಾರ ಚೀನಾ ಸೇನಾ ನಿಯೋಗ ಉದ್ದೇಶಿಸಿ ಭಾಷಣ ಮಾಡಿದ ಅವರು, ನಾವು ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಬೇಕು. ಯಾವುದೇ ಸಂಕಷ್ಟದ ಸಂದರ್ಭವಾದರೂ ಕೂಡಾ ದೇಶದ ಸಾರ್ವಭೌಮತ್ವದ ರಕ್ಷಣೆ ನಮ್ಮ ಹೊಣೆ ಎಂದು ಸೇನಾ ಪಡೆಗಳಿಗೆ ತಿಳಿಸಿದ್ದಾರೆ.
ಇನ್ನೂ ಗಡಿಭಾಗದಲ್ಲಿ ಚೀನಾ ಹಾಗೂ ಭಾರತ ಸೇನೆ ನಡುವೆ ಘರ್ಷನೆ ನಡೆಯುತ್ತಲ್ಲೇ ಇದ್ದು ಚೀನಾ ಭಾರತ ಮಾತ್ರವಲ್ಲದೇ ಅಮೆರಿಕಾ, ತೈವಾನ್ ವಿಚಾರದಲ್ಲೂ ತಕರಾರು ಎತ್ತಿದೆ.