ವಾಷಿಂಗ್ಟನ್, ಮೇ 28 (Daijiworld News/MB) : ಇ ಅಂಚೆ ಮತದಾನ (ಮೇಲ್ ಇನ್ ವೋಟಿಂಗ್) ಬಗ್ಗೆ ಅಮೆರಿಕಾ ಅಧ್ಯಕ್ಷ ಮಾಡಿದ್ದ ಎರಡು ಟ್ವೀಟ್ಗಳನ್ನು ಫಾಕ್ಟ್ ಚೆಕ್ ಮಾಡಿದ ಟ್ವಿಟರ್ ಸಂಸ್ಥೆಯ ವಿರುದ್ಧ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಟ್ವಿಟರ್ನ್ನು ನಿರ್ಬಂಧ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್ "ಟ್ವಿಟರ್ ಸಂಸ್ಥೆಯು ಅಮೆರಿಕ ಅಧ್ಯಕ್ಷೀಯ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ನನ್ನ ಭಾಷಣವನ್ನು ಕಟ್ಟಿ ಹಾಕುವ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ನಾನು ಅದಕ್ಕೆ ಅವಕಾಶ ನೀಡುವುದಿಲ್ಲ. ಟ್ವಿಟರ್ ಅನ್ನು ನಾವು ಕಠಿಣವಾಗಿ ನಿಯಂತ್ರಿಸಿ ನಿಷೇಧಿಸುತ್ತೇವೆ. 2016ರ ಚುನಾವಣೆಗಳಲ್ಲೂ ಟ್ವಿಟರ್ಇದೇ ರೀತಿಯ ಪ್ರಯತ್ನಗಳು ನಡೆಸಿದ್ದು ನಿಮ್ಮ ನಡೆಯನ್ನು ಸರಿಪಡಿಸಿಕೊಳ್ಳಿ" ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಟ್ವೀಟ್ ಮೂಲಕ ಇ ಅಂಚೆ ಮತದಾನ ನಡೆಸುವ ಕ್ಯಾಲಿಫೋರ್ನಿಯಾದ ಗವರ್ನರ್ ನಿರ್ಧಾರವನ್ನು ಪ್ರಶ್ನಿಸಿ, ಇದು ಚುನಾವಣಾ ಅಕ್ರಮಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದರು.
ಟ್ರಂಪ್ ಅವರ ಈ ಟ್ವೀಟ್ಗಳನ್ನು ಸಿಎನ್ಎನ್ ವರದಿ ಉಲ್ಲೇಖ ಮಾಡಿ ಟ್ವಿಟರ್ ಫ್ಯಾಕ್ಟ್ ಚೆಕ್ ಮಾಡಿದ್ದು ಟ್ವೀಟ್ನ ಅಡಿಯಲ್ಲೇ ಫ್ಯಾಕ್ಟ್ ಚೆಕ್ನ ಲಿಂಕ್ ಅನ್ನೂ ಸೇರಿಸಿ ಟ್ರಂಪ್ ಅವರ ಹೇಳಿಕೆ ಸತ್ಯವಲ್ಲ ಎಂದು ಹೇಳಿತ್ತು.