ವಾಷಿಂಗ್ಟನ್, ಮೇ 29 (DaijiworldNews/PY) : ಭಾರತ ಮತ್ತು ಚೀನಾ ನಡುವೆ ದೊಡ್ಡ ಸಂಘರ್ಷ ನಡೆಯುತ್ತಿದೆ. ಸದ್ಯ ಚೀನಾದ ಜೊತೆಗೆ ಎದುರಾಗಿರುವ ಈ ಪರಿಸ್ಥಿತಿಯಿಂದಾಗಿ ಅವರು ಉತ್ತಮ ಮನಸ್ಥಿತಿಯಲ್ಲಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಗುರುವಾರ ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಮಾಧ್ಯಮಗಳಿಗಿಂತಲೂ ನನ್ನನ್ನು ಭಾರತದಲ್ಲು ಹೆಚ್ಚು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ನಿಮ್ಮ ಪ್ರಧಾನಿಯನ್ನು ಇಷ್ಟಪಡುತ್ತೇನೆ. ಅವರೊಬ್ಬ ಮಹಾನ್ ಸಂಭಾವಿತ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರೊಂದಿಗೆ ನಾನು ಮಾತುಕತೆ ನಡೆಸಿದ್ದೆ. ಸದ್ಯ ಚೀನಾದೊಂದಿಗೆ ಎದುರಾಗಿರುವ ಈ ಪರಿಸ್ಥಿತಿಯಿಂದಾಗಿ ಅವರು ಉತ್ತಮವಾದ ಮನಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದರು.
ಅಲ್ಲಿನ ಪತ್ರಕರ್ತರು ಭಾರತ ಹಾಗೂ ಚೀನಾ ನಡುವಿನ ಗಡಿ ಪರಿಸ್ಥಿತಿಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚೀನಾ ಹಾಗೂ ಭಾರತದ ಮಧ್ಯರ ದೊಡ್ಡ ಸಂಘರ್ಷ ಎದುರಾಗಲಿದೆ. ಭಾರತವೂ ಸಂತೋಷವಾಗಿಲ್ಲ. ಅಲ್ಲದೇ, ಚೀನಾ ಕೂಡಾ ಸಂತೋಷವಾಗಿಲ್ಲ. ಎರಡೂ ದೇಶಗಳೂ ಕೂಡಾ 1.4 ಶತಕೋಟಿಯಷ್ಟು ಜನಸಂಖ್ಯೆ, ಅತ್ಯಂತ ಶಕ್ತಿಶಾಲಿ ಮಿಲಿಟರಿ ಪಡೆ ಹೊಂದಿವೆ ಎಂದು ಟ್ರಂಪ್ ತಿಳಿಸಿದರು.
ಈ ಬಗ್ಗೆ ಬುಧವಾರ ಟ್ವೀಟ್ ಮಾಡಿದ್ದ ಅವರು, ತಾವು ಉಭಯ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದು ಹೇಳಿಕೊಂಡಿದ್ದರು.