ವಾಷಿಂಗ್ಟನ್, ಮೇ 30 (Daijiworld News/MSP) : ವಿಶ್ವ ಆರೋಗ್ಯ ಸಂಸ್ಥೆಯ ಸಂಬಂಧಕ್ಕೆ ಅಮೇರಿಕಾ ಗುಡ್ ಬೈ ಹೇಳಿದೆ. ಕರೊನಾ ವೈರಸ್ನ ಹರಡುವಿಕೆಯನ್ನು ಆರಂಭದಲ್ಲಿ ಅತ್ಯಗತ್ಯವಿರುವ ಸುಧಾರಣೆಗಳನ್ನು ಮಾಡಲು ವಿಶ್ವಸಂಸ್ಥೆ ವಿಫಲವಾಗಿದೆ. ಹೀಗಾಗಿ ನಾವು ಅದರೊಂದಿಗಿನ ನಮ್ಮ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇವೆ,' ಎಂದು ಟ್ರಂಪ್ ಹೇಳಿದ್ದಾರೆ.
10 ದಿನಗಳ ಹಿಂದೆ ಮತ್ತೆ ವಾಗ್ದಾಳಿ ನಡೆಸಿದ್ದ ಟ್ರಂಪ್, 'ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಏಜೆಂಟರಂತೆ ಕೆಲಸ ಮಾಡುತ್ತಿದೆ ಆರೋಪಿಸಿದ್ದರು. ಆ ಬಳಿಕ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕದಿಂದ ನೀಡಲಾಗುತ್ತಿದ್ದ ಎಲ್ಲಾ ಅನುದಾನವನ್ನು ಕಡಿತ ಮಾಡಲಾಗಿದೆ. ಅದು ತನ್ನ ನಡೆಗಳಲ್ಲಿ ಸುಧಾರಣೆ ಕಂಡುಕೊಳ್ಳದೇ ಇದ್ದರೆ, ಆರ್ಥಿಕ ನೆರವನ್ನು ಶಾಶ್ವತವಾಗಿ ಕಡಿತಗೊಳಿಸುವುದಾಗಿ ಹೇಳಿದ್ದರು. ಅಲ್ಲದೆ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು ಎಂದು ಕಿಡಿಕಾರಿದ್ದರು.
ಇದೀಗ ವಿಶ್ವಸಂಸ್ಥೆಯೊಂದಿಗಿನ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇವೆ,' ಎಂದು ಖಡಕ್ ನಿರ್ಧಾರವನ್ನು ಟ್ರಂಪ್ ಬಹಿರಂಗಗೊಳಿಸಿದ್ದಾರೆ.