ನವದೆಹಲಿ, ಮೇ 31 (DaijiworldNews/PY) : ಕೊರೊನಾ ಸೋಂಕಿಗೆ ವಿಶ್ವದ 215 ರಾಷ್ಟ್ರಗಳಲ್ಲಿ ಒಟ್ಟು ಸಾವಿನ ಸಂಖ್ಯೆ ಭಾನುವಾರ 3.71 ಲಕ್ಷ ತಲುಪಿದ್ದು, ಸೋಂಕಿತರ ಸಂಖ್ಯೆ 61.60 ಲಕ್ಷಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿನಿಂದ ಅಮೆರಿಕಾ ಒಂದರಲ್ಲೇ ಮೃತಪಟ್ಟವರ ಸತ್ತವರ ಸಂಖ್ಯೆ 1.05 ಲಕ್ಷ ತಲುಪಿದೆ.
ಭಾರತದಲ್ಲಿ ಈವರೆಗೆ 182,143 ಪ್ರಕರಣಗಳು ದಾಖಲಾಗಿವೆ. ಮೃತಪಟ್ಟವರ ಸಂಖ್ಯೆ 5185ಕ್ಕೆ ಏರಿದೆ. ಬ್ರಿಟನ್ನಲ್ಲಿ 272,826 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 38,376 ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 232,664 ಪ್ರಕರಣಗಳು ದಾಖಲಾಗಿದ್ದು, 33,340 ಮಂದಿ ಮೃತಪಟ್ಟಿದ್ದಾರೆ. ಸ್ಪೇನ್ನಲ್ಲಿ 286,308 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 33,340 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ 69,496 ಪ್ರಕರಣಗಳು ದಾಖಲಾಗಿದ್ದು, 1,483 ಮಂದಿ ಮೃತಪಟ್ಟಿದ್ದಾರೆ.
ಇಲ್ಲಿಯವರೆಗೆ ಅಮೆರಿಕದಲ್ಲಿ ಕೊರೊನಾ ಸೋಂಕಿಗೆ ಒಟ್ಟು 105,557 ಮಂದಿ ಮೃತಪಟ್ಟಿದ್ದಾರೆ. ಇಲ್ಲಿ ಒಟ್ಟು 18.16 ಲಕ್ಷ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಪೈಕಿ 11.76 ಲಕ್ಷ ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 53.52 ಸಾವಿರ ಮಂದಿ ಗುಣಮುಖರಾಗಿದ್ದಾರೆ. 17 ಸಾವಿರ ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ವಿಶ್ವದಾದ್ಯಂತ 61.60 ಲಕ್ಷ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಪೈಕಿ 27.38 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ವಿಶ್ವದಲ್ಲಿ 29.97 ಲಕ್ಷ ಮಂದಿ ವಿವಿಧ ಆಸ್ಪತ್ರೆ ಹಾಗೂ ತಾತ್ಕಾಲಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ (371,006 ಲಕ್ಷ) ಹಾಗೂ ಗುಣಮುಖರಾದವರನ್ನೂ(2,738,284) ಸೇರಿ ಒಟ್ಟು 3,109,290 ಪ್ರಕರಣಗಳನ್ನು ಮುಕ್ತಾಯಗೊಳಿಸಿದ ಪ್ರಕರಣಗಳೆಂದು ಪರಿಗಣಿಸಲಾಗಿದೆ.