ವಾಷಿಂಗ್ಟನ್, ಜೂ. 02 (Daijiworld News/MB) : ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅಧಿಕ ಪ್ರಮಾಣದ ಆಂಟಿಬಯಾಟಿಕ್ಗಳನ್ನು ನೀಡುವುದರಿಂದ ರೋಗಿಯ ಚೇತರಿಕೆಗಿಂತ ಪ್ರಾಣಾಪಾಯವೇ ಅಧಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಈ ಬಗ್ಗೆ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೋಸ್ ಅಧನೋಮ್ ಗೆಬ್ರೆಯೇಸಸ್ ಅವರು, ಕೊರೊನಾ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಕೊಒರನಾ ನಿಯಂತ್ರಣ ಮಾಡಲೆಂದು ವಿಶ್ವದಾದ್ಯಂತ ರೋಗಿಗಳಿಗೆ ಆಂಟಿಬಯಾಟಿಕ್ಗಳನ್ನು ನೀಡಲಾಗುತ್ತದೆ. ಇದರಿಂದ ನಮಗೆ ಚಿಂತೆ ಉಂಟಾಗಿದೆ. ರೋಗನಿರೋಧಕ ಔಷಧಿಗಳನ್ನು ಅಸಮರ್ಪಕವಾದ ಬಳಕೆ ಮಾಡಿದರೆ ಜೀವಕ್ಕೆ ಹಾನಿ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಆಂಟಿಬಯಾಟಿಕ್ ನೀಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ. ಆದರೆ ಇದನ್ನು ಅಧಿಕವಾಗಿ ಬಳಸುವುದರಿಂದ ಕೊರೊನಾ ವಿರುದ್ಧದ ಹೋರಾಟದ ಸಂದರ್ಭದಲ್ಲೂ ಹಾಗೂ ಮತ್ತೆಯೂ ಇದು ಸಾವಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ವಿಶ್ವದಾದ್ಯಂತ ಕೊರೊನಾ ವೈರಸ್ಗೆ ಚಿಕಿತ್ಸೆಗೆ ಸಂಬಂಧಿಸಿ ಸರ್ವೇ ನಡೆಸಿದಾಗ ರೋಗಿಗಳಿಗೆ ಅಧಿಕವಾಗಿ ಆಂಟಿ ಬಯಾಟಿಕ್ ನೀಡುವುದು ಕಂಡು ಬಂದಿದೆ ಎಂದು ಹೇಳಲಾಗಿದೆ.
ಇನ್ನು ವಿಶ್ವದಾದ್ಯಂತ ಕೊರೊನಾ ಸೋಂಕಿತರ ಪೈಕಿ ಶೇ.49ರಷ್ಸು ಸೋಂಕಿತರು ಸಕ್ಕರೆ ಖಾಯಿಲೆ, ಶೇ.42ರಷ್ಟು ಸೋಂಕಿತರು ಕ್ಯಾನ್ಸರ್, ಶೇ.31ರಷ್ಟು ಹೃದಯರಕ್ತನಾಳದ ಸಮಸ್ಯೆಗಳಿಂದ ಬಳಲುತ್ತಿದ್ದು ಇದೇ ಕಾರಣದಿಂದಾಗಿ ವಿಶ್ವ ಆರೋಗ್ಯ ಸಂಸ್ಥೆ ಆಂಟಿಬಯಾಟಿಕ್ ಬಳಕೆಗೆ ಮಿತಿ ಇರಿಸುವಂತೆ ಹೇಳಿದೆ.