ಕುವೈತ್, ಜೂ 04 (Daijiworld News/MSP): ಕುವೈತ್ ಮೂಲ ನಿವಾಸಿಗಳಿಗೆ ಹೆಚ್ಚಿನ ಉದ್ಯೋಗ ಒದಗಿಸಬೇಕಾದ ದಾರಿ ಕಂಡುಕೊಳ್ಳಬೇಕಾಗಿರುವುದರಿಂದ ವಲಸಿಗರಿಗೆ ಹೆಚ್ಚಿನ ಒತ್ತು ನೀಡದೆ ಇರಲು ಅಲ್ಲಿನ ಪ್ರಧಾನಮಂತ್ರಿ ಸಬಾ ಅಲ್- ಖಲೇದ್ ಅಲ್- ಹಮದ್ ಅಲ್- ಸಬಾ ತಿಳಿಸಿದ್ದಾರೆ.
ಕುವೈತ್ ನಲ್ಲಿ ಒಟ್ಟು ಜನಸಂಖ್ಯೆಯ ಪ್ರಮಾಣ 48 ಲಕ್ಷ ಇದ್ದರೆ, ಅದರಲ್ಲಿ ಇರುವ ವಿದೇಶಿಗರ ಸಂಖ್ಯೆ 33 ಲಕ್ಷ. ಹೀಗಾಗಿ ಜನಸಂಖ್ಯೆ ಪ್ರಮಾಣವನ್ನು 70ರಿಂದ 30 ಪರ್ಸೆಂಟ್ ಗೆ ಇಳಿಸಲು ತೀರ್ಮಾನಿಸಲಾಗಿದೆ. ಕುವೈತ್ ಮೂಲ ನಿವಾಸಿಗಳು 70 ಪರ್ಸೆಂಟ್ ಹಾಗೂ ಹೊರಗಿನವರು 30 ಪರ್ಸೆಂಟ್ ಇದ್ದಲ್ಲಿ ಅದು ಸರಿಯಾದ ಲೆಕ್ಕಾಚಾರ ಆಗುತ್ತದೆ ಆದರೆ ನಮ್ಮ ಇಲ್ಲಿ ವಲಸಿಗರ ಸಂಖ್ಯೆಯೇ ಹೆಚ್ಚು. ಅದರಲ್ಲೂ ಮಧ್ಯಪ್ರಾಚ್ಯ ಹಾಗೂ ಏಷ್ಯಾದ ಕಾರ್ಮಿಕರ ಸಂಖ್ಯೆಯೇ ಅಧಿಕವಾಗಿದೆ ಎಂದು ಹೇಳಿದ್ದಾರೆ.
ವಲಸಿಗರ ಹಾಗೂ ಮೂಲ ನಿವಾಸಿಗಳ ಈ ಜನಸಂಖ್ಯೆಯ ಅಸಮತೋಲನವನ್ನು ಸರಿಪಡಿಸಲು ಹೊರಟಾಗ ನಾವು ಭವಿಷ್ಯದಲ್ಲಿ ದೊಡ್ಡ ಸವಾಲು ಎದುರಿಸಬೇಕಾಗುತ್ತದೆ ಎಂದು ತಿಳಿದಿದೆ . ತೈಲ ಬೆಲೆಯಲ್ಲಿ ಭಾರೀ ಕುಸಿತ ಆಗಿರುವುದರಿಂದ ಕುವೈತ್ ಬಜೆಟ್ ಮೇಲೂ ಪರಿಣಾಮ ಆಗಿದೆ. ಆ ಕಾರಣಕ್ಕೆ ಕುವೈತ್ ಮೂಲ ನಿವಾಸಿಗಳಿಗೆ ಹೆಚ್ಚಿನ ಉದ್ಯೋಗ ಒದಗಿಸಬೇಕಾದ ದಾರಿ ಕಂಡುಕೊಳ್ಳಬೇಕಿದೀಂದು ಹೇಳಿದ್ದಾರೆ.