ವಾಷಿಂಗ್ಟನ್, ಜೂ. 06 (Daijiworld News/MB) : ಭಾರತ ಹಾಗೂ ಚೀನಾದಂತಹ ದೇಶಗಳು ಹೆಚ್ಚಿನ ಕೊರೊನಾ ಪರೀಕ್ಷೆಗಳು ಮಾಡಿದ್ದಲ್ಲಿ ಅಮೆರಿಕಾಗಿಂತಲೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿತ್ತು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನೀವು ಸರಿಯಾಗಿ ಗಮನಿಸಿ, ಅಮೆರಿಕಾದಲ್ಲಿ 20 ದಶಲಕ್ಷಕ್ಕೂ ಅಧಿಕ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಹಾಗಾಗಿ ಕೊರೊನಾ ಪ್ರಕರಣಗಳು ಎಲ್ಲಾ ದೇಶಗಳಿಗಿಂತ ಅಮೆರಿಕಾದಲ್ಲಿ ಅಧಿಕವಾಗಿದೆ. ಹೆಚ್ಚೆಚ್ಚು ಕೊರೊನಾ ಪರೀಕ್ಷೆ ನಡೆಸಿದಾಗ ಹೆಚ್ಚು ಪ್ರಕರಣಗಳು ಬರುತ್ತದೆ ಎಂದಿದ್ದಾರೆ.
ಜರ್ಮನಿಯಲ್ಲಿ 40 ಲಕ್ಷ, ದಕ್ಷಿಣ ಕೊರಿಯಾದಲ್ಲಿ 30 ಲಕ್ಷ, ಭಾರತದಲ್ಲಿ 40 ಲಕ್ಷ ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದ್ದು ವಿಶ್ವದಲ್ಲೇ ಮೊದಲು ಕೊರೊನಾ ಪ್ರಕರಣನ ದೃಢಪಟ್ಟ ಚೀನಾದ ವುಹಾನ್ ಪ್ರಾಂತ್ಯದಲ್ಲೇ 11 ಮಿಲಿಯನ್ ಜನರ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.
ವಿಶ್ವದಲ್ಲೇ ಅಧಿಕ ಕೊರೊನಾ ಪ್ರಕರಣಗಳು ಅಮೆರಿಕಾದಲ್ಲಿ ದಾಖಲಾಗಿದ್ದು ಈವರೆಗೆ 1.9 ಮಿಲಿಯನ್ ಪ್ರಕರಣಗಳು ದೃಢಪಟ್ಟಿದ್ದು ಈ ಪೈಕಿ 110,173 ಮಂದಿ ಸಾವನ್ನಪ್ಪಿದ್ದಾರೆ.