ಇಸ್ಲಾಮಾಬಾದ್, ಜೂ. 06 (Daijiworld News/MB) : ಅಕ್ರಮವಾಗಿ ಗಡಿಯೊಳಗೆ ನುಸುಳಿದ ಭಾರತೀಯ ಬೇಹುಗಾರಿಕೆಯ ಕ್ವಾಡ್ಕ್ಯಾಪ್ಟರ್ನ್ನು ಹೊಡೆದುರುಳಿಸಿದ್ಧೇವೆ ಎಂದು ಪಾಕಿಸ್ತಾನ ಸೇನೆ ಶನಿವಾರ ಹೇಳಿಕೊಂಡಿದೆ.
ಪಾಕ್ ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕಾರ್ ಅವರು, ಮಿನಿ ಕ್ವಾಡ್ಕ್ಯಾಪ್ಟರ್ ಅಂತಾರಾಷ್ಟ್ರೀಯ ನಿಯಂತ್ರಣ ರೇಖೆಯ ಖಂಜರ್ ವಲಯದಲ್ಲಿ ದೇಶದ ವಾಯುಪ್ರದೇಶವನ್ನು ಉಲ್ಲಂಘಿಸಿ 500 ಮೀಟರ್ನಷ್ಟು ಪಾಕಿಸ್ತಾನಕ್ಕೆ ಸೇರಿದ ಗಡಿಯ ಒಳಗಡೆ ನುಗ್ಗಿದೆ ಎಂದು ಹೇಳಿದ್ದಾರೆ.
ಈ ಕ್ವಾಡ್ಕ್ಯಾಪ್ಟರ್ ಸೇರಿದಂತೆ ಪಾಕಿಸ್ತಾನ ಈ ವರ್ಷದಲ್ಲಿ 8 ಭಾರತೀಯ ಕ್ವಾಡ್ ಕಾಪ್ಟರ್ ಗಳನ್ನು ಹೊಡೆದುರುಳಿಸಿದೆ. ಆದರೆ ಪಾಕಿಸ್ತಾನ ಈ ಹಿಂದೆ ಇಂತಹ ಹೇಳಿಕೆ ನೀಡಿದಾಗ ಭಾರತ ಅದನ್ನು ಅಲ್ಲಗಳೆದಿತ್ತು.
ಪುಲ್ವಾಮಾ ದಾಳಿ ಹಾಗೂ ಜಮ್ಮು-ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದು ವಿಚಾರದಲ್ಲಿ ಈ ಉಭಯ ದೇಶಗಳ ನಡುವೆ ಇದ್ದ ಸಂಘರ್ಷದ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು ಪಾಕಿಸ್ತಾನವು ಭಾರತದ ಹೈಕಮೀಷನರ್ ಅವರನ್ನು ವಜಾಗೊಳಿಸಿ ಭಾರತದೊಂದಿಗಿನ ರಾಯಭಾರ ಸಂಬಂಧವನ್ನು ಕಡಿತಗೊಳಿಸಿದೆ.