ಇಸ್ಲಾಮಾಬಾದ್, ಜೂ.09 (DaijiworldNews/MB) : ಪಾಕಿಸ್ತಾನವು ಬಡ ರಾಷ್ಟ್ರ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರೇ ಹೇಳಿದ್ದಾರೆ.
ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಾರಿ ಮಾಡಲಾಗಿದ್ದ ಲಾಕ್ಡೌನ್ ತೆರವು ಮಾಡುವ ಮೊದಲು ದೇಶದ ಜನತೆಗೆ ಸಂದೇಶ ನೀಡಿದ ಅವರು, ನಮಗೆ ಲಾಕ್ಡೌನ್ ತೆರವು ಮಾಡುವುದನ್ನು ಹೊರತುಪಡಿಸಿ ಬೇರೆ ಮಾರ್ಗವೇ ಇಲ್ಲ. ನಮ್ಮದು ಬಡ ದೇಶ ಎಂದು ಎಲ್ಲರೂ ನೆನಪಲ್ಲಿ ಇಟ್ಟುಕೊಳ್ಳಬೇಕು. ತಜ್ಷರು ಮಾಸ್ಕ್ ಧರಿಸಿದರೆ ಕೊರೊನಾ ವೈರಸ್ ಹರಡುವಿಕೆ ಪ್ರಮಾಣವನ್ನು ಶೇ. 50ರಷ್ಟು ನಿಯಂತ್ರಿಸಬಹುದು ಎಂದು ಹೇಳಿದ್ದು ಎಲ್ಲರೂ ದಯವಿಟ್ಟು ಮಾಸ್ಕ್ ಧರಿಸಿ, ಸರ್ಕಾರದ ಮಾರ್ಗಸೂಚಿ ಪಾಲಿಸಿ ಎಂದು ವಿನಂತಿಸಿದರು.
ವಿಶ್ವವೇ ಲಾಕ್ಡೌನ್ ಕೊರೊನಾ ನಿಯಂತ್ರಣಕ್ಕೆ ಸರಿಯಾದ ಕ್ರಮವಲ್ಲ ಎಂದು ಹೇಳುತ್ತಿದ್ದು ಜಗತ್ತಿನಲ್ಲೇ ಅತೀ ಹೆಚ್ಚು ಕೊರೊನಾ ಪ್ರಕಣಗಳು ದಾಖಲಾಗಿರುವ ಅಮೆರಿಕವೇ ಲಾಕ್ಡೌನ್ ತೆರವು ಮಾಡಿದೆ ಎಂದು ಹೇಳಿದ ಅವರು ಇದೇ ಸಂದರ್ಭದಲ್ಲಿ ಲಾಕ್ಡೌನ್ ಜಾರಿಯಲ್ಲಿ ಇದ್ದಾರೆ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಿತ್ತು ಎಂದು ಕೂಡಾ ಹೇಳಿದ್ದಾರೆ.
ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಹೇರಲಾಗಿದ್ದ ಲಾಕ್ಡೌನ್ನ್ನು ಭಾರತ ಸೇರಿದಂತೆ ಹಲವು ದೇಶಗಳು ಹಂತಹಂತವಾಗಿ ತೆರವು ಮಾಡುತ್ತಿದ್ದು ಏತನ್ಮಧ್ಯೆ ಪಾಕಿಸ್ತಾನವೂ ಲಾಕ್ಡೌನ್ ತೆರವು ಮಾಡಲು ಮುಂದಾಗಿದೆ.