ಬೀಜಿಂಗ್, ಜೂ.11 (DaijiworldNews/MB) : ದಕ್ಷಿಣ ಮತ್ತು ಮಧ್ಯ ಚೀನಾದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು12 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ ಲಕ್ಷಾಂತರ ಮಂದಿಯನ್ನು ಮನೆಗಳಿಂದ ತೆರವು ಮಾಡಲಾಗಿದೆ.
ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವ ಚೀನಾ ಸರ್ಕಾರ, ಚೀನಾದಲ್ಲಿ ಜೂನ್ 2ರಿಂದ ಪ್ರವಾಹ ಆರಂಭವಾಗಿದ್ದು ಈವರೆಗೆ ಸುಮಾರು 2.28ಲಕ್ಷ ಮಂದಿ ತುರ್ತು ಆಶ್ರಯ ಪಡೆದಿದ್ದಾರೆ. 36 ಶತಕೋಟಿಗಿಂತಲೂ ಅಧಿಕ ಹಾನಿ ಉಂಟಾಗಿದ್ದು ಒಂದು ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಗುವಾಂಗ್ಸಿಯ ದಕ್ಷಿಣ ಪ್ರಾಂತ್ಯದಲ್ಲಿ ಆರು ಮಂದಿ, ಚೀನಾದ ಉತ್ತರ ಭಾಗದ ಹುನನ್ ಪ್ರಾಂತ್ಯದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಅವರೆಲ್ಲರೂ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿವರ್ಷವೂ ಚೀನಾದ ಯಾಂಗ್ಟ್ಜೆ ಮತ್ತು ಪರ್ಲ್ ನದಿಗಳ ದಕ್ಷಿಣ ಭಾಗಗಳಲ್ಲಿ ಪ್ರವಾಹ ಉಂಟಾಗಿ ಭಾರೀ ಪ್ರಮಾಣದ ಹಾನಿಯಾಗುತ್ತಿದ್ದು 2008ರಲ್ಲಿ ಚೀನಾದಲ್ಲಿ ಭಾರೀ ಪ್ರವಾಹಕ್ಕೆ ಎರಡು ಸಾವಿರಕ್ಕೂ ಅಧಿಕ ಬಲಿಯಾಗಿದ್ದರು.