ಬೀಜಿಂಗ್, ಜೂ 13 (DaijiworldNews/PY) : ವಿದೇಶದಿಂದ ಆಗಮಿಸಿದವರಲ್ಲದೇ, ಬೀಜಿಂಗ್ನಲ್ಲಿ ಆಂತರಿಕವಾಗಿ ಆರು ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾದ ಹಿನ್ನೆಲೆ ಅಲ್ಲಿನ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ.
ಬೀಜಿಂಗ್ನಲ್ಲಿ ಆಂತರಿಕವಾಗಿ ಪತ್ತೆಯಾದ 6 ಪ್ರಕರಣಗಳು ಸೇರಿದಂತೆ ದೇಶದಲ್ಲಿ ಶುಕ್ರವಾರ 18 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಶುಕ್ರವಾರ, ಲಕ್ಷಣ ರಹಿತ ಏಳು ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಇಲ್ಲಿಯವರೆಗೆ ಇಂತಹ 98 ಮಂದಿಯನ್ನು ಪ್ರತ್ಯೇಕ ಮಾಡಲಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ.
ಶುಕ್ರವಾರ, ಆಮದು ಮಾಡಿಕೊಳ್ಳಲಾಗುವಂತ ಸಾಲ್ಮನ್ ಮೀನುಗಳನ್ನು ಕತ್ತರಿಸುವ ಕ್ಸಿನ್ ಫಾಡಿ ಮಾರುಕಟ್ಟೆಯಲ್ಲಿ ಏಳು ಕೊರೊನಾ ಪ್ರಕರಣಗಳು ಪತ್ತೆಯಾದವು. ಹಾಗಾಗಿ ಅಲ್ಲಿನ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಅಲ್ಲದೇ ಅಲ್ಲಿನ 9 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ವರದಿಗಳು ನೆಗೆಟಿವ್ ಬಂದಿದೆ. ಆದರೂ ಅವರನ್ನು ಪ್ರತ್ಯೇಕಿಸಲಾಗಿದೆ. ಅಲ್ಲದೇ, ಕೆಲವು ಮಾಂಸ ಮಾರುಕಟ್ಟೆಗಳನ್ನೂ ಕೂಡಾ ಲಾಕ್ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.