ವಾಷಿಂಗ್ಟನ್, ಜೂ.14 (DaijiworldNews/MB) : ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ವಿರೋಧಿಸಿ ಅಮೆರಿಕಾದಲ್ಲಿ ಪ್ರತಿಭಟನೆಗಳು ತೀವ್ರವಾಗಿ ನಡೆಯುತ್ತಿದ್ದು ಏತನ್ಮಧ್ಯೆ ಮತ್ತೋರ್ವ ಕಪ್ಪು ವರ್ಣೀಯನನ್ನು ಅಟ್ಲಾಂಟಾ ನಗರದಲ್ಲಿ ಪೊಲೀಸರು ಹತ್ಯೆ ಮಾಡಿದ್ದಾರೆ. ಈ ಘಟನೆಯ ಕಾರಣದಿಂದಾಗಿ ಅಟ್ಲಾಂಟಾ ನಗರದ ಪೊಲೀಸ್ ಮುಖ್ಯಸ್ಥೆ ಎರಿಕಾ ಶೀಲ್ಡ್ಸ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಅಮೆರಿಕದ ಅಟ್ಲಾಂಟಾ ನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಆಗ ರೇಷಾರ್ಡ್ ಬ್ರೂಕ್ಸ್ ಎಂಬ ಕಪ್ಪು ವರ್ಣಿಯ ಅಲ್ಲಿಂದ ಓಡಿ ಹೋಗಿದ್ದು ಪೊಲೀಸರು ಗುಂಟು ಹಾರಿಸಿದ್ದಾರೆ. ಗುಂಡು ತಗುಲಿದ ರೇಷಾರ್ಡ್ ಬ್ರೂಕ್ಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಈ ಘಟನೆಯ ಕಾರಣದಿಂದಾಗಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅಟ್ಲಾಂಟಾ ನಗರದ ಪೊಲೀಸ್ ಮುಖ್ಯಸ್ಥೆ ಎರಿಕಾ ಶೀಲ್ಡ್ಸ್, ಇದೊಂದು ಅಚಾರ್ತುಯ, ನೈತಿಕ ಹೊಣೆಗಾರಿಕೆಯ ಕಾರಣದಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಹಾಗೆಯೇ ಈ ಬಗ್ಗೆ ಮಾಹಿತಿ ನೀಡಿರುವ ಅಟ್ಲಾಂಟಾ ನಗರದ ಮೇಯರ್ ಕೀಶಾ ಲ್ಯಾನ್ಸ್ ಬಾಟಮ್ಸ್, ರೇಷಾರ್ಡ್ ಬ್ರೂಕ್ಸ್ ಮೇಲೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.