ಬೀಜಿಂಗ್, ಜೂ.16 (DaijiworldNews/MB) : ಸೋಮವಾರ ರಾತ್ರಿ ಲಡಾಖ್ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೇನೆಯ ನಡುವೆ ಗುಂಡಿನ ಚಕಮಕಿ ನಡೆಯಲು ಭಾರತವೇ ಕಾರಣ, ಮೊದಲು ಭಾರತದ ಯೋಧರೇ ದಾಳಿ ನಡೆಸಿದೆ ಎಂದು ಚೀನಾ ಆರೋಪಿಸಿದೆ.
ಈ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್, ಭಾರತದ ಸೇನೆಯೇ ಮೊದಲು ದಾಳಿ ನಡೆಸಿದೆ. ಸೋಮವಾರ ರಾತ್ರಿ ಭಾರತದ ಸೇನೆ 2 ಬಾರಿ ಗಡಿ ದಾಟಿದೆ. ಬಳಿಕ ನಮ್ಮನ್ನು ಕೆಣಕಿ ದಾಳಿ ನಡೆಸಿದೆ ಎಂದು ದೂರಿದ್ದಾರೆ.
ಭಾರತವು ಮೊದಲು ದಾಳಿ ನಡೆಸಿದ ಪರಿಣಾಮ ಉಭಯ ರಾಷ್ಟ್ರಗಳ ಯೋಧರಿಗೂ ಹಾನಿ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಲಡಾಖ್ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾ ಭಾರತ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದ್ದು ಈ ಸಂದರ್ಭದಲ್ಲಿ ಭಾರತದ ಸೇನಾಪಡೆಯ ಅಧಿಕಾರಿ ಮತ್ತು ಇಬ್ಬರು ಯೋಧರು ಹುತಾತ್ಮರಾಗಿದೆ. ಚೀನಾದ ಸೇನೆಗೂ ಹಾನಿಯಾಗಿದೆ ಎಂದು ಹೇಳಲಾಗಿದೆ.