ವಾಷಿಂಗ್ಟನ್, ಜೂ.17 (DaijiworldNews/MB) : ಭಾರತ, ಚೀನಾ ಗಡಿ ಸಂಘರ್ಷ ಶಾಂತಿಯುತವಾಗಿ ಬಗೆಹರಿಸುವ ವಿಶ್ವಾಸವಿದೆ ಎಂದು ಅಮೆರಿಕ ಬುಧವಾರ ಹೇಳಿದೆ.
ಗಡಿಯಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಯನ್ನು ಅಮೆರಿಕವು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು ಭಾರತ ಮತ್ತು ಚೀನಾ ನಡುವಿನ ಗಡಿ ರೇಖೆಯಲ್ಲಿ ಉಂಟಾಗಿರುವ ವಿಷಮ ಪರಿಸ್ಥಿತಿಯನ್ನು ಉಭಯ ದೇಶಗಳು ಶಾಂತಿಯುತವಾದ ಮಾತುಕತೆ ಮೂಲಕ ಪರಿಹರಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಕಳೆದ ನಾಲ್ಕು ದಶಕಗಳ ಬಳಿಕ ಭಾರತ, ಚೀನಾ ಗಡಿಯಲ್ಲಿ ರಕ್ತಪಾತ ಉಂಟಾಗಿದೆ. ಈ ಸಂರ್ಘದಲ್ಲಿ ಭಾರತ 20 ಯೋಧರು ಸಾವನ್ನಪ್ಪಿದ್ದಾರೆ ಎಂದು ಭಾರತ ಪ್ರಕಟಿಸಿದೆ. ಮೃತ ಯೋಧರ ಕುಟುಂಬಕ್ಕೆ ನಮ್ಮ ಸಂತಾಪ ಎಂದು ಹೇಳಿದ್ದಾರೆ.
ಭಾರತ ನಮ್ಮ ಮಿತ್ತ ದೇಶ. ಈ ಉಭಯ ರಾಷ್ಟ್ರಗಳ ನಡುವೆ ಮಾತುಕತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಸಿದ್ದ. ಈ ಕುರಿತಾಗಿ ಜೂನ್ 2 ರಂದು ಭಾತರದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.