ಬೀಜಿಂಗ್, ಜೂ.17 (DaijiworldNews/MB) : ಪೂರ್ವ ಲಡಾಕ್ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಉಭಯ ರಾಷ್ಟ್ರದ ಯೋಧರು ಸಾವನ್ನಪ್ಪಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾವು "ಗಲ್ವಾನ್ ಕಣಿವೆಯ ಸೌರ್ವಭೌಮತ್ವ ನಿಯಂತ್ರಣ ಎಂದಿಗೂ ಚೀನಾಕ್ಕೆ ಸೇರಿದ್ದು ಎಂದು ಹೇಳಿದೆ.
ಗಡಿಯ ಪ್ರಾತಿನಿಧಿಕ ಚಿತ್ರ
ಈ ಕುರಿತು ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಜ್ವೌ ಲಿಜಿಯಾನ್ ಹೇಳಿಕೆಯಲ್ಲಿ, ಉಭಯ ರಾಷ್ಟ್ರಗಳ ನಡುವಿನ ಗಡಿ ವಿವಾದದ ಕುರಿತಾಗಿ ಶಾಂತಿಯುತವಾಗಿ ಮಾತುಕತೆ ನಡೆಸಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಬೇಕಾದರೆ ಭಾರತೀಯ ಯೋಧರು ಗಡಿ ನಿಯಮ ಉಲ್ಲಂಘಿಸಿ ಪ್ರಚೋದನಾಕಾರಿ ಚಟುವಟಿಕೆ ನಡೆಸುವುದನ್ನು ನಿಲ್ಲಿಸಬೇಕು. ಆ ಬಳಿಕವಷ್ಟೇ ಶಾಂತಿಯುತವಾದ ಮಾತುಕತೆ ನಡೆಸಿ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳೋಣ ಎಂದು ಹೇಳಿದೆ.
ಎಂದಿಗೂ ಗಲ್ವಾನ್ ಕಣಿವೆಯ ಸೌರ್ವಭೌಮತ್ವ ನಿಯಂತ್ರಣ ಚೀನಾಕ್ಕೆ ಸೇರಿದ್ದು. ಭಾರತದೊಂದಿಗೆ ಚೀನಾ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆ ನಡೆಸುತ್ತಿದೆ ಎಂದಿದೆ.
ಇನ್ನು ಭಾರತ ಚೀನಾದ ಯೋಧರ ನಡುವೆ ಚೀನಾದ ಭಾಗದಲ್ಲಿ ಆಗಿದ್ದು ಇದಕ್ಕಾಗಿ ಚೀನಾವನ್ನು ದೂರಬಾರದು. ಇಂತಹ ಸಂಘರ್ಷವನ್ನು ಚೀನಾ ಎಂದಿಗೂ ನೋಡಲು ಇಚ್ಛಿಸುವುದಿಲ್ಲ ಎಂದು ಹೇಳಿದೆ.