ಇಸ್ಲಾಮಾಬಾದ್, ಜೂ.18 (DaijiworldNews/MB) : ಭಾರತೀಯ ಸೈನಿಕರು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಗಡಿಯನ್ನು ಉಲ್ಲಂಘನೆ ಮಾಡಿ ಬಂದು ಗುಂಡಿನ ದಾಳಿ ಮಾಡಿ ನಾಲ್ವರು ನಾಗರಿಕರು ಹತ್ಯೆಯಾಗಿದ್ದಾರೆ ಎಂದು ಪಾಕಿಸ್ತಾನ ಸೇನೆ ಹೇಳಿಕೊಂಡಿದೆ.
ಈ ಬಗ್ಗೆ ಪಾಕಿಸ್ತಾನ ಸೇನಾಪಡೆಯ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಖಾರ್ ಹೇಳಿಕೆ ಬಿಡುಗಡೆ ಮಾಡಿದ್ದು, ಮೃತ ನಾಗರಿಕರು ನಾಲ್ವರು ಕೂಡಾ ಮಹಿಳೆಯರು. ಮತ್ತೋರ್ವರಿಗೆ ಗಾಯವಾಗಿದೆ ಎಂದು ಹೇಳಿದ್ದಾರೆ.
ಭಾರತದ ಸೇನೆಯು ನಿಕಿಯಾಲ್ ಮತ್ತು ಬಗ್ಸಾರ್ ವಲಯಗಳಲ್ಲಿ ಯಾವುದೇ ಪ್ರಚೋದನೆ ನೀಡದ ಹೊರತಾಗಿಯೂ ನಾಗರಿಕರ ಮೇಲೆಯೇ ಗುರಿಯಿಟ್ಟು ಗುಂಡು ಹಾರಿಸಿದೆ. ಭಾರತಕ್ಕೆ ಪಾಕಿಸ್ತಾನ ಸೇನೆ ಪ್ರತ್ಯುತ್ತರ ನೀಡಿದೆ ಎಂದು ಹೇಳಿದೆ.