ವಾಷಿಂಗ್ಟನ್, ಜೂ 20 (Daijiworld News/MSP): ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ ಮುಖ್ಯಸ್ಥರಾಗಿ ಭಾರತೀಯ ಮೂಲದ 58 ವರ್ಷದ ವಿಜ್ಞಾನಿ ಡಾ.ಸೇತುರಾಮನ್ ಪಂಚನಾಥನ್ ನೇಮಕಗೊಂಡಿದ್ದಾರೆ.
ವಾರ್ಷಿಕ 7.4 ಬಿಲಿಯನ್ ಡಾಲರ್ ವ್ಯವಹಾರ ಹೊಂದಿರುವ ನ್ಯಾಷನಲ್ ಸೈನ್ಸ್ ಫೌಂಡೇಶನ್ ನ ಮುಖ್ಯಸ್ಥರಾಗಿ ಜುಲೈ 6 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಪ್ರಸ್ತುತ ಹಾರಿಜೋನ ವಿಶ್ವ ವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚನಾಥನ್ ಅವರನ್ನು ನಿಯೋಜನೆ ಮಾಡಿರುವುದನ್ನು ಅಮೆರಿಕ ಸೆನೆಟ್ ದೃಢಪಡಿಸಿದೆ.
ಫ್ರಾನ್ಸ್ ಕೋರ್ಡೋವಾ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಪಂಚನಾಥನ್ ನಿಯೋಜನೆಗೊಂಡಿದ್ದಾರೆ. ಸೆನೆಟ್ ನ ಆಡಳಿತ ಮತ್ತು ವಿರೋಧ ಪಕ್ಷಗಳು ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಪಂಚನಾಥನ್ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.