ಲಂಡನ್, ಜೂ 25(DaijiworldNews/PY) : ಗಡಿಗೆ ಸಂಬಂಧಪಟ್ಟ ವಿವಾದವನ್ನು ಮಾತುಕತೆಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಅವರು ಭಾರತಕ್ಕೆ ಹಾಗೂ ಚೀನಾಕ್ಕೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಪೂರ್ವ ಲಡಾಖ್ನ ಪ್ರಸ್ತುತ ಪರಿಸ್ಥಿತಿಯನ್ನು ಬ್ರಿಟನ್ ಎಚ್ಚರಿಕೆಯಿಂದ ಗಮನಿಸುತ್ತಿದೆ. ಅಲ್ಲದೇ, ಅಲ್ಲಿನ, ಪರಿಸ್ಥಿತಿಯೂ ಕೂಡಾ ಗಂಭೀರವಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ಎರಡೂ ರಾಷ್ಟ್ರಗಳು ಮಾತುಕತೆ ನಡೆಸುವ ಮೂಲಕ ಬಗೆಹರಿಸಿಕೊಳ್ಳುವಂತೆ ಮಾಡಲು ಎರಡೂ ರಾಷ್ಟ್ರಗಳನ್ನು ಪೋತ್ಸಾಹಿಸುವುದೇ ನಾವು ಮಾಡುವ ಅತ್ಯುತ್ತಮವಾದ ಕಾರ್ಯ ಎಂದಿದ್ದಾರೆ.
ಈ ಹಿಂದೆ ಎರಡೂ ರಾಷ್ಟ್ರಗಳ ಮಧ್ಯೆ ಆಗಿರುವ ಒಪ್ಪಂದವನ್ನು ಜಾರಿಗೆ ತರುವುದೇ ಗಡಿಯಲ್ಲಿ ಶಾಂತಿ ಹಾಗೂ ನೆಮ್ಮದಿಯನ್ನು ಸ್ಥಾಪನೆ ಮಾಡಿರುವ ಮಾರ್ಗವಾಗಿದ್ದು, ಈ ವಿಚಾರಕ್ಕೆ ಎರಡೂ ಒಪ್ಪಿಗೆ ನೀಡಿವೆ ಎಂದು ನವದೆಹಲಿಯಲ್ಲಿ ಬುಧವಾರ ವಿದೇಶಾಂಗ ಇಲಾಖೆ ತಿಳಿದ್ದು, ಈ ನಡುವೆ ಈ ವಿಚಾರದ ಬಗ್ಗೆ ಬ್ರಿಟನ್ ಪ್ರಧಾನಿ ಬೋರಸ್ ಜಾನ್ಸನ್ ಕೂಡಾ ಸಲಹೆ ನೀಡಿದ್ದಾರೆ.