ಲಂಡನ್, ಜೂ 26(DaijiworldNews/PY) : ಕೊರೊನಾ ಸೋಂಕಿಗೆ ಒಳಪಟ್ಟವರ ಪ್ರತಿ ರಕ್ಷಣಾ ಕ್ರಮದ ಅಧ್ಯಯನ ನಡೆಸಿದ ಬ್ರಿಟನ್ನಿನ ಲಾಸನ್ ಹೆಲ್ತ್ ರೀಸರ್ಚ್ ಇನ್ಸ್ಟಿಟ್ಯೂಟ್ನ ವಿಜ್ಞಾನಿಗಳು, ಸೋಂಕಿಗೆ ಒಳಗಾದಂತ ರೋಗಿಗಳಲ್ಲಿ ವಿಶಿಷ್ಟವಾದ ಮಾದರಿಯ ಆರು ಅಣುಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ.
ಸಾಂದರ್ಭಿಕ ಚಿತ್ರ
ಅಧ್ಯಯನ ಬಗ್ಗೆ ತಿಳಿಸಿದ ವಿಜ್ಞಾನಿ ಫ್ರೇಸರ್, ಮೊದಲ ಬಾರಿಗೆ ನಾವು ಅಧ್ಯಯನದ ಮೂಲಕ ಈ ಬಗ್ಗೆ ಕಂಡುಕೊಂಡಿದ್ದೇವೆ. ಹಾಗಾಗಿ ಇದು ಔಷಧ ಪತ್ತೆ ಮಾಡುವಲ್ಲಿ ಸಹಾಯವಾಗಲಿದೆ ಎಂದಿದ್ದಾರೆ.
ಅಧ್ಯಯನ ನಡೆಸಿದ ಬ್ರಿಟನ್ನಿನ ಲಾಸನ್ ಹೆಲ್ತ್ ರೀಸರ್ಚ್ ಇನ್ಸ್ಟಿಟ್ಯೂಟ್ನ ವಿಜ್ಞಾನಿಗಳು, ಕೊರೊನಾ ಸೋಂಕಿಗೆ ತುತ್ತಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿದ್ದು, ಇಂತಹ ರೋಗಿಗಳಲ್ಲಿ ಜನಸಾಮಾನ್ಯರಲ್ಲಿ ಕಾಣಿಸದಂತ ವಿಶಿಷ್ಟವಾದ ಅಣುಗಳು ಇರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಅಧ್ಯಯನ ಬಗ್ಗೆ ವಿವರಣೆ ನೀಡಿದ ವಿಜ್ಞಾನಿಗಳು, ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಹತ್ತು ಮಂದಿ, ಇತರೆ ಕಾಯಿಲೆ ಹೊಂದಿ ಆಸ್ಪತ್ರೆಗೆ ದಾಖಲಾಗಿರುವ ಹತ್ತು ಮಂದಿ ಹಾಗೂ ಆರೋಗ್ಯಕರವಾದ ಹತ್ತು ಮಂದಿಯನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಈ ವರದಿ ತಯಾರು ಮಾಡಲಾಗಿದೆ ಎಂದಿದ್ದಾರೆ.