ಲಾಹೋರ್, ಜೂ 27 (Daijiworld News/MSP): ಲಂಡನ್ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಪಾಕ್ ನ ಮಾಜಿ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ಮೂವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ.
ಅಕ್ರಮ ಭೂ ಹಂಚಿಕೆ ಆರೋಪದಡಿ ಈ ಪ್ರಕರಣ ದಾಖಲಾಗಿದ್ದು ಷರೀಫ್ ಅವರನ್ನು ಬಂಧಿಸಲು ವಾರಂಟ್ ಹೊರಡಿಸಲಾಗಿದೆ. ನವಾಜ್ ಷರೀಫ್ ಜತೆ ಜಿಯೋ ಮಿಡಿಯಾ ಗ್ರೂಪ್ ಮಾಲೀಕ ಮೀರ್ ಶಕಿಲೂರ್ ರಹಮಾನ್, ಲಾಹೋರ್ ಅಭಿವೃದ್ಧಿ ಪ್ರಾಧಿಕಾರದ (ಎಲ್ಡಿಎ) ಮಾಜಿ ನಿರ್ದೇಶಕ ಹುಮಯೂನ್ ಫೈಜ್ ರಸೂಲ್ ಮತ್ತು ಮಾಜಿ ನಿರ್ದೇಶಕ ಮಿಯಾನ್ ಬಶೀರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನವಾಜ್ ಷರೀಫ್ ಅವರು 1986ರಲ್ಲಿ ಪಂಜಾಬ್ ನ ಮುಖ್ಯಮಂತ್ರಿಯಾಗಿದ್ದ ನಿಯಮಗಳನ್ನು ಉಲ್ಲಂಘಿಸಿ ಜಾಮೀನು ಮಂಜೂರು ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ವಿಚಾರವಾಗಿ ಸಮನ್ಸ್ ನೀಡಿದ್ದರು, ಷರೀಫ್ ಅವರು ಉತ್ತರ ನೀಡದಿರುವುದರಿಂದ ಅವರನ್ನು ಘೋಷಿತ ಅಪರಾಧಿ ಎಂದು ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೊ , ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯಕ್ಕೆ ಮನವಿ ಮಾಡಿದೆ.