ವಾಷಿಂಗ್ಟನ್, ಜೂ. 27 (DaijiworldNews/MB) : ಚೀನಾವು ನೆರೆ ರಾಷ್ಟ್ರಗಳನ್ನು ಸೈನ್ಯದ ಮೂಲಕ ಪ್ರಚೋದಿಸುತ್ತಿದ್ದು ಈ ಕ್ರಮಗಳನ್ನು ಅಮೆರಿಕವು ಸಹಿಸುವುದಿಲ್ಲ, ಚೀನಾದ ಅಪ್ರಚೋದಿತ ದಾಳಿ ಸಹಿಸಲಾಗದು. ಇದು ಜಗತ್ತು ಒಗ್ಗೂಡುವ ಸಮಯ, ಚೀನಾಕ್ಕೆ ಸಾಕು ಎಂದು ಹೇಳಿ ಎಂದು ಪ್ರಭಾವಿ ಸಂಸದ ಟೆಡ್ ಯೊಹೊ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಕೊರೊನಾ ಸಾಂಕ್ರಾಮಿಕದಿಂದ ಉಂಟಾಗಿರುವ ಗೊಂದಲವನ್ನು ಮರೆಮಾಚುವ ಸಲುವಾಗಿ ಚೀನಾದ ಕಮ್ಯುನಿಸ್ಟ್ ಪಕ್ಷ ಹಾಂಗ್ಕಾಂಗ್, ತೈವಾನ್, ವಿಯೆಟ್ನಾಂ ಮುಂತಾದ ನೆರೆ ರಾಷ್ಟ್ರಗಳ ವಿರುದ್ಧ ದೊಡ್ಡ ಪ್ರಮಾಣದ ಸೇನಾ ಪ್ರಚೋದನೆಗಳನ್ನು ಚೀನಾ ನಡೆಸುತ್ತಿದೆ. ಶಾಂತಿಯುತ ರಾಷ್ಟ್ರಗಳನ್ನು ಸಲ್ಲಿಕೆಗೆ ವಿರೋಧಿಸುವ ಮತ್ತು ಬೆದರಿಸುವ ಉದ್ದೇಶದಿಂದ ಚೀನಾದ ಇಂತಹ ಅಪ್ರಚೋದಿತ, ಪೂರ್ವನಿಯೋಜಿತ ಕ್ರಮಗಳ ಪರ ಅಮೆರಿಕ ನಿಲ್ಲುವುದಿಲ್ಲ. ಇದು ಜಗತ್ತು ಒಗ್ಗೂಡುವ ಸಮಯ, ಈಗ ಚೀನಾಕ್ಕೆ ಸಾಕು ಎಂದು ಹೇಳಿ'' ಎಂದಿದ್ದಾರೆ.
ಇನ್ನು ಭಾರತ ಮೂಲದ, ಹಲವು ಕಾಲದವರೆಗೆ ಹೌಸ್ಆಫ್ ರೆಪ್ರೆಸೆಂಟಿಟಿವ್ಸ್ ಸದಸ್ಯರಾಗಿದ್ದ ಡಾ. ಅಮಿ ಬೆರಾ ಅವರು, ಹಲವು ವರ್ಷಗಳಿಂದ ಪಾಲಿಸುತ್ತಿರುವ ನಿಯಮಗಳನ್ನು ಪಾಲಿಸಿ ಚೀನಾವು ಭಾರತದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಬೇಕೆ ಹೊರತು ಈ ರೀತಿ ಭಾರತದ ಮೇಲೆ ಇತ್ಯರ್ಥ ನಡೆಸುವಂತೆ ಒತ್ತಡ ಹೇರಬಾರದು ಎಂದು ಹೇಳಿದ್ದಾರೆ.