ಅಮೆರಿಕ, ಜೂ 28(DaijiworldNews/PY) : ತಂದೆಯ ಅಜಾಗರೂಕತೆಯಿಂದ ಕಾರಿನಲ್ಲಿಯೇ ಉಳಿದು 11 ತಿಂಗಳ ಕಂದಮ್ಮ ಸಾವನ್ನಪ್ಪಿದ ಘಟನೆ ಉತ್ತರ ವರ್ಜಿನಿಯಾದಲ್ಲಿ ನಡೆದಿದೆ.
ಈ ಬಗ್ಗೆ ತಿಳಿಸಿದ ಫೇರ್ಫ್ಯಾಕ್ಸ್ ಕೌಂಟಿ ಪೊಲೀಸ್ ಇಲಾಖೆ, ಕಾರಿನಲ್ಲಿ ಪ್ರತಿಕ್ರಿಯಿಸದ ಶಿಶು ಕಾರಿನಲ್ಲಿ ಕಂಡು ಬಂದಿದ್ದು, ತಂದೆಯ ಅಜಾಗರೂಕತೆಯಿಂದ ಶಿಶು ಸಾವನ್ನಪ್ಪಿದೆ ಎಂದು ತಿಳಿಸಿದೆ.
ಎಸ್ಯುವಿ ಕಾರಿನ ಹಿಂದಿನ ಸೀಟ್ನಲ್ಲಿ ಮಗುವಿನ ತಂದೆ ಮಗುವನ್ನು ಮರೆತು, ತನ್ನ ಇನ್ನೊಂದು ಮಗುವನ್ನು ಕರೆತರುವ ಸಲುವಾಗಿ ಇನ್ನೊಂದು ಕಾರಿನತ್ತ ಹೋಗಿದ್ದಾರೆ. ಕಾರಿನ ಬಾಗಿಲು ತುಂಬಾ ಸಮಯ ಮುಚ್ಚಿದ್ದ ಕಾರಣ ಕಾರಿನಲ್ಲಿದ್ದ ಶಿಶು ಸಾವನ್ನಪ್ಪಿದೆ ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ.