ಬೀಜಿಂಗ್, ಜೂ 28(DaijiworldNews/PY) : ಚೀನಾದ ಕಮ್ಯುನಿಸ್ಟ್ ಪಕ್ಷದ ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾ - ಭಾರತ ಸಂಘರ್ಷದಲ್ಲಿ ತಮ್ಮವರನ್ನು ಕಳೆದುಕೊಂಡ ಚೀನಾದ ಕುಟುಂಬಗಳನ್ನು ಅಸಮಾಧಾನಗೊಳಿಸಿವೆ ಎಂದು ಅಮೆರಿಕ ಮೂಲದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಬ್ರೀಟ್ ಬಾರ್ಟ್ ಪ್ರಕಾರ, ಚೀನಾ ಸರ್ಕಾರವು ತಮ್ಮ ಕೋಪ ಹಾಗೂ ಹತಾಶೆಯನ್ನು ಹೊರಹಾಕುವ ಸಲುವಾಗಿ ವೀಬೋ ಹಾಗೂ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿರುವ ಸೈನಿಕರ ಕುಟುಂಬಗಳನ್ನು ಸಂತೈಸಲು ಕಷ್ಟಪಡುತ್ತಿದೆ.
ಗಾಲ್ವಾನ್ ಕಣಿವೆಯಲ್ಲಿ ನಡೆದಿದ್ದ ಸಂಘರ್ಷದಲ್ಲಿ ಚೀನಾದ 43 ಮಂದಿ ಮೃತಪಟ್ಟಿದ್ದಾರೆ ಎಂದು ಇತ್ತೀಚೆಗೆ ಭಾರತ ಸರ್ಕಾರದ ಹಾಲಿ ಸಚಿವ ಜನರಲ್ ವಿಕೆ ಸಿಂಗ್ ಹೇಳಿದ್ದರು.
ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ ತಮ್ಮ 20 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಭಾರತ ಸರ್ಕಾರ ತಿಳಿಸಿದೆ. ಇಲ್ಲಿಯವರೆಗೆ ಕೆಲವು ಅಧಿಕಾರಿಗಳು ಮಾತ್ರ ಸಾವನ್ನಪ್ಪಿರುವುದಾಗಿ ಚೀನಾ ಸರ್ಕಾರ ಒಪ್ಪಿಕೊಂಡಿದೆ.
ಚೀನಾದ ಸರ್ಕಾರ ಮಾಧ್ಯಮಗಳ ಪ್ರಧಾನ ಸಂಪಾದಕ ಹೂ ಕ್ಸಿಜಿನ್ ಟ್ವೀಟ್ ಮಾಡಿದ್ದು, ನಗೆ ತಿಳಿದಿರುವ ಆಧಾರದ ಮೇಲೆ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಚೀನಾ ಸೈನ್ಯ ಕಡೆಯವರು ಕೂಡಾ ಸಾವು-ನೋವು ಅನುಭವಿಸಿದ್ದಾರೆ ಎಂದಿದ್ದಾರೆ.
ಆದರೆ, ಅನೇಕ ವರದಿಗಳ ಪ್ರಕಾರ, ಚೀನಾದ ಕುಟುಂಬಗಳು ತಮ್ಮ ಸರ್ಕಾರದ ಗೌಪ್ಯತೆಯ ಬಗ್ಗೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸಲು ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆಯಾದ ವೀಬೊವನ್ನು ಬಳಸುತ್ತಿದ್ದಾರೆ.
ಉನ್ನತ ಮಟ್ಟದಲ್ಲಿ ಒಪ್ಪಂದವನ್ನು ಚೀನಾದ ಕಡೆಯವರು ಸೂಕ್ಷ್ಮವಾಗಿ ಅನುಸರಿಸಿದ್ದರೆ ಪರಿಸ್ಥಿತಿಯನ್ನು ತಪ್ಪಿಸಬಹುದಿತ್ತು ಎಂದು ಭಾರತ ಹೇಳಿದೆ.