ಕರಾಚಿ, ಜೂ 29 (Daijiworld News/MSP): ಪಾಕಿಸ್ತಾನದ ಕರಾಚಿಯ ಸ್ಟಾಕ್ ಎಕ್ಸಚೇಂಜ್ ಆವರಣದಲ್ಲಿ ಉಗ್ರರು ಸೋಮವಾರ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಉಗ್ರರು ಸೇರಿ 9 ಮಂದಿ ಮೃತಪಟ್ಟಿದ್ದಾರೆ.
ಪಿಎಸ್ಎಕ್ಸ್ ಕಟ್ಟಡದ ಪ್ರವೇಶದ್ವಾರದಲ್ಲಿ ಸಶಸ್ತ್ರ ಭಯೋತ್ಪಾದಕರು ಗುಂಡು ಹಾರಿಸಿ ಗ್ರೆನೇಡ್ ಎಸೆದ ಪರಿಣಾಮ ಕನಿಷ್ಠ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ದಾಳಿ ವೇಳೆಗೆ ಪೊಲೀಸರು ಆವರಣವನ್ನು ಸುತ್ತುವರಿಸಿ ಪ್ರತಿದಾಳಿ ನಡೆಸಿದ ಪರಿಣಾಮ ಈ ವೇಳೆ ನಾಲ್ವರು ಉಗ್ರರು ಮೃತಪಟ್ಟಿದ್ದಾರೆ. ಇನ್ನು ಕಾರ್ಯಾಚರಣೆ ಮುಂದುವರೆದಿದೆ.
ಪ್ರಾಥಮಿಕ ವರದಿ ಪ್ರಕಾರ, ಭಯೋತ್ಪಾದಕರು ಬೆಳಗ್ಗೆ 10 ಗಂಟೆ ವೇಳೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಸ್ಟಾಕ್ ಎಕ್ಸಚೇಂಜ್ ಕಾಂಪೌಂಡ್ ಬಳಿ ದಾಳಿ ನಡೆಸಿ ಒಳಗೆ ನುಗ್ಗಿದ್ದರು. ನಂತರ ಮನಬಂದಂತೆ ಗುಂಡಿನ ಮಳೆಗೈದಿದ್ದಾರೆ. ಇದೇ ವೇಳೆ ಗ್ರೆನೇಡ್ ದಾಳಿ ಕೂಡ ನಡೆಸಿದ್ದಾರೆ. ದಾಲಿ ನಡೆದ ಕೂಡಲೇ ಪೊಲೀಸರು ಮತ್ತು ರೇಂಜರ್ಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ನಾಲ್ವರು ಭಯೋತ್ಪಾದಕರನ್ನು ಕೊಂದಿದ್ದಾರೆ. ಅಲ್ಲದೆ ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಗ್ರೆನೇಡ್ ವಶಪಡಿಸಿಕೊಂಡಿದ್ದಾರೆ
ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಾಯಗೊಂಡಿದ್ದು ಸಾವು-ನೋವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ