ವಾಷಿಂಗ್ಟನ್, ಜೂ. 29 (DaijiworldNews/MB) : ಅಮೆರಿಕದಲ್ಲಿ ಕಪ್ಪುವರ್ಣೀಯರ ಮೇಲೆ ನಡೆಯುತ್ತಿರುವ ಶೋಷಣೆಯ ವಿರುದ್ಧವಾಗಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆ ಬಿಳಿಯರ ಶಕ್ತಿ ಎಂಬ ಘೋಷಣೆಯುಳ್ಳ ವಿಡಿಯೋವೊಂದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೀಟ್ವೀಟ್ ಮಾಡಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ.
''ಹಳ್ಳಿಯ ಈ ಮಹಾ ಜನರಿಗೆ ಧನ್ಯವಾದಗಳು. ಎಡ ಸಿದ್ಧಾಂತಿಗಳು ಡೆಮಾಕ್ರಟ್ಗಳಿಗೆ ಏನೂ ಮಾಡಲಾಗುವುದಿಲ್ಲ. ಅವರು ಕೆಳಗೆ ಬೀಳುತ್ತಾರೆ'' ಎಂದು ಬರೆದಿರುವ ತಮ್ಮನ್ನು ಬೆಂಬಲಿಸುವವರು ಮತ್ತು ವಿರೋಧಿಸುವರನ್ನು ಒಳಗೊಂಡ ವಿಡಿಯೊವೊಂದನ್ನು ಅವರು ರೀಟ್ವೀಟ್ ಮಾಡಿದ್ದು ಇದರಲ್ಲಿ 'ಟ್ರಂಪ್ 2020' ಹಾಗೂ 'ಅಮೆರಿಕ ಫಸ್ಟ್' ಎಂಬ ಚಿಹ್ನೆಯುಳ್ಳ ವಾಹನವನ್ನು ಚಲಾಯಿಸುತ್ತಿರುವ ವ್ಯಕ್ತಿ 'ಬಿಳಿಯರ ಶಕ್ತಿ' ಎಂಬ ಘೋಷಣೆ ಕೂಗುತ್ತಾನೆ. ಹಾಗೆಯೇ ಜನಾಂಗೀಯ ದ್ವೇಷದ ವಿರುದ್ಧ ಹೋರಾಟ ಮಾಡುವವರು 'ರೇಸಿಸ್ಟ್' ಹಾಗೂ 'ನಾಜಿ' ಎಂದು ಘೋಷಣೆ ಕೂಗುವುದನ್ನೂ ಕೂಡಾ ತೋರಿಸಲಾಗಿದೆ.
ಈ ವಿಡಿಯೋವನ್ನು ಟ್ರಂಪ್ ಹಾಕಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಕೆಲವೇ ಹೊತ್ತಿನಲ್ಲಿ ಟ್ರಂಪ್ ಡಿಲೀಟ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ವೈಟ್ ಹೌಸ್ ಅದರಲ್ಲಿ ಬಿಳಿಯರ ಶಕ್ತಿ ಎಂದು ಘೋಷನೆ ಕೂಗಿರುವುದನ್ನು ಟ್ರಂಪ್ ಗಮನಿಸಿರಲಿಲ್ಲ ಎಂದು ಹೇಳಿದ್ದಾರೆ.