ವಾಷಿಂಗ್ಟನ್, ಜೂ 30(DaijiworldNews/PY): ಆಡಳಿತರೂಢ ರಿಪಬ್ಲಿಕನ್ ಹಾಗೂ ವಿರೋಧಪಕ್ಷ ಡೆಮಾಕ್ರಟಿಕ್ ಪಕ್ಷದ ಸದಸ್ಯರು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಅಮೆರಿಕದ ಬಾಂಧವ್ಯ ಬಲಪಡಿಸಲು ನೆರವಾಗುವ ಮಸೂದೆಯನ್ನು ಮಂಗಳವಾರ ಮಂಡನೆ ಮಾಡಿದರು.
ವಿಶೇಷವಾಗಿ ಐದನೇ ಪೀಳಿಗೆಯ ಯುದ್ಧ ವಿಮಾನಗಳ ಪ್ರದೇಶದಲ್ಲಿ ಮತ್ತು ಮಿಲಿಟರಿ ಕ್ಷೇತ್ರದಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ಮಸೂದೆಯನ್ನು ಮಂಡಿಸಿದ್ದಾರೆ.
ರಾಷ್ಟ್ರೀಯ ರಕ್ಷಣಾ ದೃಢೀಕರಣ ಕಾಯ್ದೆ ಕಾಯ್ದೆ 2021 ಕ್ಕೆ ತಿದ್ದುಪಡಿಯನ್ನು ಮಂಡನೆ ಮಾಡಿದ ಸೆನೆಟರ್ ಮಾರ್ಕ್ ವಾರ್ನರ್ ಮತ್ತು ಸೆನೆಟರ್ ಜಾನ್ ಕಾರ್ನಿನ್ ಅವರು ಇಸ್ರೇಲ್-ಯುಎಸ್ ಬೈನೇಶನಲ್ ಇಂಡಸ್ಟ್ರಿಯಲ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಫೌಂಡೇಶನ್ ಮತ್ತು ಫಂಡ್ ಅಮೆರಿಕ-ಭಾರತ ಖಾಸಗಿಯವರಿಗೆ ಮಾದರಿಯನ್ನು ಒದಗಿಸುತ್ತದೆಯೇ ಎಂದು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರಿಂದ ಮೌಲ್ಯಮಾಪನ ಕೇಳಿದರು.
ಸೆನೆಟರ್ ಕಾರ್ನಿನ್, ಎನ್ಡಿಎಎಗೆ ಮಾಡಿದ ಮತ್ತೊಂದು ತಿದ್ದುಪಡಿಯಲ್ಲಿ, ಶಾಸನ ಅಂಗೀಕಾರವಾದ 180 ದಿನಗಳಲ್ಲಿ ಅಮೆರಿಕದ ಐದನೇ ಪೀಳಿಗೆಯ ಫೈಟರ್ ಜೆಟ್ಗಳ ಕಾರ್ಯಕ್ರಮದ ಬಗ್ಗೆ ಭಾರತಕ್ಕೆ ಮಾಹಿತಿ ನೀಡುವಂತೆ ರಕ್ಷಣಾ ಕಾರ್ಯದರ್ಶಿಯನ್ನು ಕೇಳಿದರು.