ತೆಹ್ರಾನ್, ಜು. 01 (DaijiworldNews/MB) : ಇರಾನ್ನ ರಾಜಧಾನಿ ತೆಹ್ರಾನ್ನ ಉತ್ತರ ಭಾಗದ ವೈದ್ಯಕೀಯ ಕ್ಲಿನಿಕ್ನಲ್ಲಿ ಅನಿಲ ಸೋರಿಕೆಯಿಂದ ಸ್ಫೋಟವಾಗಿ 19 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಮೃತರ ಪೈಕಿ 15 ಮಹಿಳೆಯರು ಹಾಗೂ ನಾಲ್ವರು ಪುರುಷರಾಗಿದ್ದಾರೆ. ಇನ್ನು 20 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ತೆಹ್ರಾನ್ನ ಉಪ ಗವರ್ನರ್ ಹಮಿದ್ರೆಝ ಗೌದರ್ಜಿ ಅವರು, ವೈದ್ಯಕೀಯ ಕೇಂದ್ರದಲ್ಲಿ ಆಕ್ಸಿಜನ್ ಸಂಗ್ರಹಿಸಿದ ಟ್ಯಾಂಕ್ಗಳಿದ್ದವು. ಇನ್ನು ಅನಿಲ ಸೋರಿಕೆಯಾಗಿ ಹಲವು ಸ್ಪೋಟವಾಗಿರುವುದು ವಿಡಿಯೋದಿಂದ ತಿಳಿದು ಬಂದಿದೆ. ಇದರಿಂದಾಗಿ ಕಟ್ಟಡದಲ್ಲಿ ಬೆಂಕಿ ಆವರಿಸಿದೆ. ಈ ಸಂದರ್ಭದಲ್ಲಿ ತಜ್ರಿಷ್ ಬಜಾರ್ನಲ್ಲಿದ್ದ ಜನರು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.