ಮ್ಯಾನ್ಮಾರ್, ಜು 02 (Daijiworld News/MSP): ಮ್ಯಾನ್ಮಾರ್ ನ ಕಾಚಿನ್ ರಾಜ್ಯದ ಹಪಕಾಂತ್ ಟೌನ್ಶಿಪ್ನ ಗಣಿ ಪ್ರದೇಶದಲ್ಲಿ ಭಾರಿ ಭೂ ಕುಸಿತ ಉಂಟಾಗಿದ ಪರಿಣಾಮ ಕನಿಷ್ಟ 50 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಅನೇಕ ಮಂದಿ ಕಾಣೆಯಾಗಿದ್ದು, 50ಕ್ಕೂ ಹೆಚ್ಚು ಮಂದಿ ಭೂ ಸಮಾಧಿಯಾಗಿದ್ದಾರೆ. ಸ್ಥಳೀಯ ಸಮಯ ಬೆಳಿಗ್ಗೆ 08:00 ಗಂಟೆಗೆ ಹಪಕಾಂತ್ ಟೌನ್ಶಿಪ್ನ ಸೇಟ್ ಮು ಹಳ್ಳಿಯಲ್ಲಿರುವ ಜೇಡ್ ಗಣಿಗಾರಿಕೆ ಸ್ಥಳದಲ್ಲಿ ಮಣ್ಣು, ಧೂಳಿನ ಬಿರುಗಾಳಿ, ಭಾರಿ ಮಳೆ ಸುರಿದ ಪರಿಣಾಮ ಭೂಕುಸಿತವಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಈ ಪ್ರದೇಶದಲ್ಲಿ ಭೂ ಕುಸಿತ ನಿರೀಕ್ಷಿತವಾಗಿದ್ದು, ಅಪಾಯಕಾರಿ ಪ್ರದೇಶವಾಗಿದೆ. ಈ ದುರಂತ ಸಂಭವಿಸಿದಾಗ ನೂರಾರು ಮಂದಿ ಗಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯಕ್ಕೆ 50 ಶವಗಳನ್ನು ಗುರುತಿಸಲಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.2015ರಲ್ಲಿ ಇದೇ ಪ್ರದೇಶದಲ್ಲಿ ಗಣಿಭಾಗದ ಭೂ ಕುಸಿತದಿಂದಾಗಿ ಸುಮಾರು 116 ಮಂದಿ ಮೃತಪಟ್ಟಿದ್ದರು.