ನ್ಯೂಯಾರ್ಕ್, ಜು 03 (Daijiworld News/MSP): ಕೊರೊನಾ ವಿಷವ್ಯೂಹಕ್ಕೆ ಸಿಲುಕಿ ನಲುಗುತ್ತಿದೆ ಅಮೆರಿಕಾ. ಒಂದೇ ದಿನ 54,771 ಜನರಿಗೆ ಸೋಂಕು ಪತ್ತೆಯಾಗಿ ಬ್ರೆಜಿಲ್ ನ ದಾಖಲೆಯನ್ನು ಇದೀಗಾ ಅಮೇರಿಕಾ ಮುರಿದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು 55 ಸಾವಿರ ಜನರಿಗೆ ಸೋಂಕು ಪತ್ತೆಯಾಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಅಮೇರಿಕಾದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿರುವುದು.
ಇದೇ ಪರಿಸ್ಥಿತಿ ಅಮೇರಿಕಾದಲ್ಲಿ ಮುಂದುವರೆದರೆ ದಿನನಿತ್ಯ ಸುಮಾರು 1 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗಲುವ ಸಾಧ್ಯತೆ ತಳ್ಳಿಹಾಕುವಂತಿಲ್ಲ . ತಕ್ಷಣ ಇದಕ್ಕೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆಂಥೋನಿ ಫೌಸಿ ಎಚ್ಚರಿಸಿದ್ದಾರೆ.
ಕೊರೊನಾ ಕಂಟಕ ವಿಶ್ವದ ದೊಡ್ಡಣ್ಣ ಅಮೆರಿಕಾನನ್ನು ಬಿಡದಂತೆ ಕಾಡುತ್ತಿದ್ದುಅಮೆರಿಕಾದ 50 ರಾಜ್ಯಗಳಲ್ಲಿ 37% ರಷ್ಟು ಹೊಸ ಸೋಂಕು ಪ್ರಕರಣಗಳು ಏರಿಕೆಯಾಗಿದೆ. ಪ್ಲೋರಿಡಾ ವೊಂದರಲ್ಲೇ ಪ್ರತಿನಿತ್ಯ 10 ಸಾವಿರ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ
ಇನ್ನು 28 ಲಕ್ಷಕ್ಕಿಂತ ಹೆಚ್ಚಿನ ಜನರು ವೈರಾಣು ಕಾಟದಿಂದ ತತ್ತರಿಸಿದ್ದು ಈವರೆಗೆ ಸುಮಾರು 1.31 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.