ವಿಶ್ವಸಂಸ್ಥೆ, ಜು 06 (Daijiworld News/MSP): ಕೊವೀಡ್ -19 ವೈರಸ್ ಗಾಳಿಯಲ್ಲೂ ಪ್ರಸರಣವಾಗುತ್ತದೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು "ವಿಶ್ವ ಆರೋಗ್ಯ ಸಂಸ್ಥೆ"ಯನ್ನು 30 ಕ್ಕೂ ಹೆಚ್ಚು ದೇಶಗಳ 200 ಕ್ಕೂ ಹೆಚ್ಚು ವಿಜ್ಞಾನಿಗಳು ಒತ್ತಾಯಿಸುತ್ತಿದ್ದಾರೆ.
ಗಾಳಿಯಲ್ಲಿ ಹರಡಬಹುದೆಂಬ ಸಣ್ಣ ಅನುಮಾನ ಇಂದು ದೊಡ್ಡದಾಗಿ ಬೆಳೆದಿದೆ. ವೈರಸ್ ಗಾಳಿಯಲ್ಲಿ ವ್ಯರ್ಥವಾಗದೆ ವಾಯು ಪ್ರಸರಣದ ಮೂಲಕ ಮನೆಯೊಳಗೆ ಇದ್ದರೂ ಹರಡಬಹುದು ಮತ್ತು ಸಾಂಕ್ರಾಮಿಕವಾಗಬಹುದು ಎಂಬುದಕ್ಕೆ ದೃಢವಾದ ಸಾಕ್ಷಿ ಬೆಳೆಯುತ್ತಿದೆ. ಎಂದು "ಕೋವಿಡ್ -19 ರ ಗಾಳಿ ಮೂಲಕ ಪ್ರಸರಣವನ್ನು ಪರಿಹರಿಸಲು ಇದು ಸಮಯ" ಎಂಬ ಶೀರ್ಷಿಕೆಯ ದಾಖಲೆ ಪತ್ರದಲ್ಲಿ ಸುಮಾರು 239 ವಿಜ್ಞಾನಿಗಳು ಸಹಿ ಮಾಡಿದ್ದು ಇದನ್ನು ವಿಶ್ವಸಂಸ್ಥೆ ಸಲ್ಲಿಸಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಾರೆ
ಇತ್ತೀಚಿನವರೆಗೂ, ಹೆಚ್ಚಿನ ಸಾರ್ವಜನಿಕ ಆರೋಗ್ಯ ಮಾರ್ಗಸೂಚಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು , ನಿಯಮಿತವಾಗಿ ಕೈ ತೊಳೆಯುವುದು ಮತ್ತು ಮಾಸ್ಕ್ ಧರಿಸುವ ಮೂಲಕ ಎಂಜಲಿನ ಹನಿಗಳ ಮೂಲಕಕೊವೀಡ್ ಹರಡುವುದನ್ನು ತಪ್ಪಿಸಲು ಮುನ್ನೆಚ್ಚರಿಕೆಗಳ ಮೇಲೆ ಕೇಂದ್ರೀಕರಿಸಿದೆ.
ಆದರೆ ಸಹಿ ಮೂಲಕ ಎಚ್ಚರಿಕೆಯನ್ನು ನೀಡಲು ಹೊರಟ ವಿಜ್ಞಾನಿಗಳು " ವೈರಸ್ ವಾಯು ಪ್ರಸರಣದ ಮೂಲಕ ಹರಡುವ ಸಾಮರ್ಥ್ಯವನ್ನು ಡಬ್ಲ್ಯುಎಚ್ಒನಂತಹ ಸಾರ್ವಜನಿಕ ಆರೋಗ್ಯ ಸಂಸ್ಥೆಗಳೂ ಕೂಡಾ ಇನ್ನೂ ಸಂಪೂರ್ಣ ಒಪ್ಪಿಕೊಂಡಿಲ್ಲ" ಎಂದು ಹೇಳುತ್ತಾರೆ.
wHO ಇಂದು ಕಠಿಣ ಸ್ಥಾನದಲ್ಲಿದ್ದು, ಇಡೀ ಜಗತ್ತಿಗೆ ಶಿಫಾರಸುಗಳನ್ನು ಮಾಡಬೇಕಾಗಿದ್ದು, ಅದು ಒಂದು ತೀರ್ಮಾನಕ್ಕೆ ಬರುವ ಮೊದಲು ಅದಕ್ಕೆ ನಿರಾಕರಿಸಲಾಗದ ವೈಜ್ಞಾನಿಕ ಪುರಾವೆ ಬೇಕು ಎಂದು ಭಾವಿಸುತ್ತದೆ. ಆದರೆ ಸ್ಪಷ್ಟವಾದ ಮಾರ್ಗದರ್ಶನವಿಲ್ಲದೆ ಹೋದರೆ WHO ಬಗ್ಗೆ ಸಂಪೂರ್ಣ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ" ಜಾರ್ಜ್ಟೌನ್ ವಿಶ್ವವಿದ್ಯಾಲಯದ ಜಾಗತಿಕ ಆರೋಗ್ಯ ಕಾನೂನಿನ ಪ್ರಾಧ್ಯಾಪಕ ಲಾರೆನ್ಸ್ ಗೋಸ್ಟಿನ್ ವಿಶ್ವ ಆರೋಗ್ಯ ಸಂಸ್ಥೆ ಗೆ ಎಚ್ಚರಿಕೆ ನೀಡಿದ್ದಾರೆ.