ಬೀಜಿಂಗ್, ಜು 07 (Daijiworld News/MSP): ಗಾಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ನಡೆದ ಭಾರತ - ಚೀನಾ ಘರ್ಷಣೆಯಲ್ಲಿ ಭಾರತದ 20 ಯೋಧರು ವೀರಮರಣವಪ್ಪಿದ್ರೆ ಅತ್ತ ಚೀನಾ ಮಾತ್ರ ತಮ್ಮವರು ಯಾರೂ ಕೂಡಾ ಹತರಾಗಿಲ್ಲ ಎಂದು ಹೇಳಿಕೆ ನೀಡಿತ್ತು. ಆದರೆ ಭಾರತ ಮಾತ್ರ ಚೀನಾದ 43 ಯೋಧರು ಸಾವಿಗೀಡಾಗಿದ್ದಾರೆ ಎಂದು ಹೇಳಿಕೆ ನೀಡಿತ್ತು. ಇದೀಗ ಸತ್ಯ ವಿಚಾರ ಹೇಳಿದ್ರೆ ವರ್ಚಸ್ಸಿಗೆ ಕುಂದು ಎಂಬ ನಿಲುವು ತಳೆದಿದ್ದ ಚೀನಾದ ಅಧ್ಯಕ್ಷ ಕ್ಸಿ ಜಿಂಗ್ಪಿಂಗ್ ವಾಸ್ತವ ಮುಚ್ಚಿಟ್ಟಿದ್ದ ಸತ್ಯ ಬಯಲಾಗಿದೆ.
ಭಾರತದ ಯೋಧರ ದಾಳಿಗೆ ನೂರಕ್ಕೂ ಹೆಚ್ಚು ಚೀನಿ ಸೈನಿಕರು ಹತರಾಗಿದ್ದಾರೆ ಎಂಬ ಸತ್ಯಾಂಶವನ್ನು ಚೀನಾದ ನಿವೃತ್ತ ಉನ್ನತ ಸೇನಾಧಿಕಾರಿ ಜಿಯಾನ್ಲಿ ಯಾಂಗ್ ಇದೀಗ ದೃಢಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, " ಸಂಘರ್ಷದಲ್ಲಿ ಭಾರತದ 20 ಯೋಧರು ಹತರಾಗಿದ್ದರೆ, ನಮ್ಮ ಸೇನೆಯ ನೂರಕ್ಕೂ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ ಎಂದು ಬಹಿರಂಗಗೊಳಿಸಿದ್ದಾರೆ.
ಈ ದಾಳಿಯಲ್ಲಿ ತಮ್ಮವರು ಹತರಾಗಿಲ್ಲ ಎಂದು ಆರಂಭದಲ್ಲಿ ಹೇಳಿಕೆ ನೀಡಿದ ಚೀನಾ ನಂತರ ಅಧಿಕಾರಿ ಸೇರಿದಂತೆ 35 ಮಂದಿ ಬಲಿಯಾದರು ಎಂದು ತಿಳಿಸಿತ್ತು. ಆದರೆ ಜಿಯಾನ್ಲಿ ಯಾಂಗ್ ನೂರಕ್ಕೂ ಹೆಚ್ಚು ಸೈನಿಕರನ್ನು ನಾವು ಕಳೆದುಕೊಂಡಿದ್ದಾರೆ ಎನ್ನುವ ಸತ್ಯ ವಿಚಾರ ಟ್ವೀಟ್ ಮಾಡಿದ್ದು ಇವರ ಹೇಳಿಕೆಗೆ ಚೀನಾದ ಕೆಲವು ರಾಜಕೀಯ ಮುಖಂಡರು ಮತ್ತು ನಿವೃತ್ತ ಸೇನಾಧಿಕಾರಿಗಳು ಸಹ ಸಾಥ್ ನೀಡಿದ್ದಾರೆ.