ವಿಶ್ವಸಂಸ್ಥೆ, ಜು 08 (Daijiworld News/MSP): ಕೊರೊನಾ ವೈರಸ್ ಗಾಳಿಯ ಮೂಲಕ ಹರಡುತ್ತದೆ ಎಂಬ ವಾದವನ್ನು ನಿರಾಕರಿಸುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿವ ಮೂಲಕ ವಾಯು ಮೂಲಕ ಹರಡುವಿಕೆಯ "ಪುರಾವೆಗಳು ಹೊರಬಂದಿವೆ" ಎಂದು ಒಪ್ಪಿಕೊಂಡಿವೆ.
ಕೊವೀಡ್ -19 ವೈರಸ್ ಗಾಳಿಯಲ್ಲೂ ಪ್ರಸರಣವಾಗುತ್ತದೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು "ವಿಶ್ವ ಆರೋಗ್ಯ ಸಂಸ್ಥೆ"ಯನ್ನು 30 ಕ್ಕೂ ಹೆಚ್ಚು ದೇಶಗಳ 200 ಕ್ಕೂ ಹೆಚ್ಚು ವಿಜ್ಞಾನಿಗಳು ಒತ್ತಾಯಿಸಿದ ಬಳಿಕ ವಿಶ್ವಸಂಸ್ಥೆ ಈ ಹೇಳಿಕೆ ನೀಡಿದೆ.
"ನಾವು ಕೊವೀಡ್ -19 ರ ಪ್ರಸರಣ ವಿಧಾನಗಳಲ್ಲಿ ಒಂದಾದ ಗಾಳಿಯ ಮೂಲಕ ಪ್ರಸರಣ ಸಾಧ್ಯತೆಯ ಬಗ್ಗೆ ಚರ್ಚಿಸುತ್ತೇವೆ, ಕೆಲವೆಡೆಯೆ ವಾತಾವರಣಗಳಲ್ಲಿ ಗಾಳಿಯಿಂದಲೂ ಸೋಂಕು ಹರಡುವುದು ದೃಢಪಟ್ಟಿದೆ. ಹೀಗಾಗಿ ಒಳಾಂಗಣದಲ್ಲಿ ಹೇಗಿರಬೇಕು ಎಂಬ ಮಾರ್ಗಸೂಚಿಗಳನ್ನು ಪರಿಷ್ಕರಿಸಬೇಕಿದೆ" ಎಂದು ಡಬ್ಲ್ಯುಎಚ್ಒ ನಲ್ಲಿನ ಕೊವೀಡ್ -19 ಸಾಂಕ್ರಾಮಿಕ ರೋಗದ ತಾಂತ್ರಿಕ ಪ್ರಮುಖರಾದ ಮಾರಿಯಾ ವ್ಯಾನ್ ಕೆರ್ಕೋವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗಾಳಿಯಲ್ಲಿ ತೇಲುವ ವೈರಸ್ ಕಣಗಳು ಉಸಿರಾಡುವ ಜನರಿಗೆ ಸೋಂಕು ತಗುಲಿಸುತ್ತದೆ ಎಂದು 200 ಕ್ಕೂ ಹೆಚ್ಚು ವಿಜ್ಞಾನಿ ಪುರಾವೆಗಳ ವಿವರಿಸಿದ್ದು, ಸಾಕ್ಷ್ಯವನ್ನು ಅಂಗೀಕರಿ ಡಬ್ಲ್ಯುಎಚ್ಒ ಕೊವೀಡ್ ವಿಚಾರವಾಗಿ ನೀಡುವ ಮಾರ್ಗದರ್ಶನವನ್ನು ನವೀಕರಿಸಲು ಒತ್ತಾಯಿಸಿತ್ತು.