ಇಸ್ಲಾಮಾಬಾದ್, ಜು 08 (DaijiworldNews/PY): ಗೂಢಚರ್ಯೆ ಮತ್ತು ಭಯೋತ್ಪಾದಕ ಚಟುವಟಿಕೆಗಳ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಜಾಧವ್, ತನ್ನ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಪರಿಶೀಲನಾ ಅರ್ಜಿ ಸಲ್ಲಿಸಲು ನಿರಾಕರಿದ್ದಾರೆ. ಬದಲಿಗೆ ಕ್ಷಮದಾನ ಅರ್ಜಿ ಪ್ರತಿಕ್ರಿಯೆ ಮುಂದುವರಿಸಲು ತೀರ್ಮಾನಿಸಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.
ಜೂನ್ 17, 2020 ರಂದು, ಕುಲಭೂಷಣ್ ಜಾಧವ್ ಅವರ ಶಿಕ್ಷೆ ಮತ್ತು ಅಪರಾಧದ ಪರಿಶೀಲನೆ ಮತ್ತು ಮರುಪರಿಶೀಲನೆಗಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ತನ್ನ ಕಾನೂನುಬದ್ಧ ಹಕ್ಕನ್ನು ಚಲಾಯಿಸಿ, ಶಿಕ್ಷೆಯನ್ನು ಮರುಪರಿಶೀಲಿಸಲು ಅವರು ಅರ್ಜಿಯನ್ನು ಸಲ್ಲಿಸಲು ನಿರಾಕರಿಸಿದರು ಎಂದು ಅಟಾರ್ನಿ ಜನರಲ್ ಉಲ್ಲೇಖಿಸಿ ಪಾಕಿಸ್ತಾನ ಮಾಧ್ಯಮ ಹೇಳಿದೆ.
ಕುಲಭೂಷಣ್ ಜಾಧವ್ ಅವರು ಏಪ್ರಿಲ್ 17, 2017 ರಂದು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಅನುಸರಿಸಲು ಆದ್ಯತೆ ನೀಡಿದ್ದಾರೆ ಎಂದು ಹೇಳಿದರು. ಪಾಕಿಸ್ತಾನ ಸರ್ಕಾರವು ಎರಡನೇ ಬಾರಿಗೆ ಜಾಧವ್ಗೆ ಭಾರತಕ್ಕೆ ಅವಕಾಶ ನೀಡಲಿದೆ ಎಂದರು.
ಪಾಕಿಸ್ತಾನದ ಪ್ರಕಾರ, ಜಾಧವ್ ಅವರನ್ನು ಮಾರ್ಚ್ 3, 2016 ರಂದು ಬಂಧಿಸಲಾಗಿದ್ದು, 2017ರ ಏಪ್ರಿಲ್ನಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಜಾಧವ್ಗೆ ಮರಣದಂಡನೆ ವಿಧಿಸಲಾಗಿತ್ತು.