ಬೆಂಗಳೂರು, ಜು 09 (DaijiworldNews/PY): ಕೊರೊನಾ ಹೆಚ್ಚಾಗುತ್ತಿರುವ ನಡುವೆಯೂ ಅಮೆರಿಕದ ಶಾಲೆಗಳನ್ನು ಮತ್ತೆ ತೆರೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀರ್ಮಾನಿಸಿದ್ದು, ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಕಳುಹಿಸದಿದ್ದಲ್ಲಿ ಹಣಕಾಸು ನೆರವನ್ನು ತಡೆಯುವುದಾಗಿ ಹೇಳಿದ್ದಾರೆ.
ರೋಗ ನಿಯಂತ್ರಣ ಕೇಂದ್ರದ ಅಧಿಕಾರಿಗಳು ಕೂಡಲೇ ಶಾಲಾ-ಕಾಲೇಜುಗಳ ಆರಂಭಕ್ಕೆ ಅಗತ್ಯವಾದಂತಹ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡುತ್ತಾರೆ ಎಂದು ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಘೋಷಣೆ ಮಾಡಿರುವ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಈ ಮಾಹಿತಿಯನ್ನು ನೀಡಿದ್ದಾರೆ.
ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳ ಮೇಲೆ ಟ್ರಂಪ್ ಹೆಚ್ಚಿದ ಒತ್ತಡದ ಹೊರತಾಗಿಯೂ, ನ್ಯೂಯಾರ್ಕ್ ನಗರದಿಂದ ಹೆಚ್ಚಿನ ವಿದ್ಯಾರ್ಥಿಗಳು ವಾರಕ್ಕೆ ಎರಡು ಅಥವಾ ಮೂರು ದಿನಗಳು ಮಾತ್ರ ತರಗತಿಗಳಿಗೆ ಬರಲಿದ್ದು, ಉಳಿದ ದಿನಗಳಲ್ಲಿ ಆನ್ಲೈನ್ನಲ್ಲಿ ಮೂಲಕವೇ ಶಿಕ್ಷಣ ಪಡೆಯುತ್ತಾರೆ. ಹೆಚ್ಚಿನ ಶಾಲೆಗಳು ತಮ್ಮ ಎಲ್ಲ ಮಕ್ಕಳನ್ನು ಒಂದೇ ಸಮಯದಲ್ಲಿ ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಮೇಯರ್ ಬಿಲ್ ಡೆ ಬ್ಲಾಸಿಯೊ ಹೇಳಿದರು.