ವಾಷಿಂಗ್ಟನ್, ಜು 12 (DaijiworldNews/PY): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಫೇಸ್ ಮಾಸ್ಕ್ ಧರಿಸಿದ್ದು, ಅಮೆರಿಕ ಅಧ್ಯಕ್ಷರ ಮುದ್ರೆಯನ್ನು ಫೇಸ್ಮಾಸ್ಕ್ನಲ್ಲಿ ಹಾಕಲಾಗಿತ್ತು.
ಟ್ರಂಪ್ ವಾಷಿಂಗ್ಟನ್ನ ಹೊರವಲಯದ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಗೆ ಗಾಯಗೊಂಡ ಯೋಧರನ್ನು ನೋಡಲು ಭೇಟಿ ನೀಡಿದ್ದ ಸಂದರ್ಭ ಕಪ್ಪು ಬಣ್ಣದ ಮಾಸ್ಕ್ ಅನ್ನು ಧರಿಸಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಶ್ವೇತಭವನದಿಂದ ಹೊರಬಂದಾಗ ಮಾತನಾಡಿದ ಅವರು, ಮುಖವಾಡ ಧರಿಸುವುದು ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ. ನಾನು ಎಂದೂ ಮುಖವಾಡಗಳ ವಿರುದ್ಧವಿರಲಿಲ್ಲ ಆದರೆ ಅದಕ್ಕೆ ಸಮಯ ಮತ್ತು ಸ್ಥಳವಿದೆ ಎಂದು ನಾನು ನಂಬುತ್ತೇನೆ ಎಂದು ಹೇಳಿದರು.
ಕೊರೊನಾದಿಂದ ಅಮೆರಿಕವು ವಿಶ್ವದ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದ್ದರೂ ಸಹ, ಕೊರೊನಾ ಸೋಂಕನ್ನು ನಿಭಾಯಿಸಲು ಟ್ರಂಪ್ ತನ್ನ ಆಡಳಿತವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ, ಕೊರೊನಾ ಅಮೆರಿಕಕ್ಕೆ ವ್ಯಾಪಿಸಿದ ಬಳಿಕ ಇದೇ ಮೊದಲ ಬಾರಿಗೆ ಟ್ರಂಪ್ ಅವರು ಫೇಸ್ಕ್ ಮಾಸ್ಕ್ ಧರಿಸಿದ್ದಾರೆ.