ಜಿನೀವಾ , ಜು 14 (DaijiworldNews/PY): ಕೆಲವು ನಾಯಕರು ಕೊರೊನಾ ವೈರಸ್ ಬಗ್ಗೆ ಮಿಶ್ರ ಸಂದೇಶಗಳನ್ನು ನೀಡುವ ಮೂಲಕ ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಅವರು ತಮ್ಮ ರಾಷ್ಟ್ರವನ್ನು ಕೊರೊನಾ ವೈರಸ್ನಿಂದ ನಿಯಂತ್ರಣ ಮಾಡುವಲ್ಲಿ ವಿಫಲರಾಗಿದ್ದು, ಸಾಮಾನ್ಯ ಸ್ಥಿತಿಗೆ ಮರಳುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅಡೆನಾಂ ಗ್ಯಾಬ್ರೆಯೆಸಸ್ ಹೇಳಿದ್ದಾರೆ.
ನಿರ್ದಿಷ್ಟ ರಾಜಕಾರಣಿಗಳನ್ನು ಟೀಕೆಗೆ ಕರೆದಿಲ್ಲ ಆದರೆ ಸಾಂಕ್ರಾಮಿಕ ರೋಗದೊಂದಿಗೆ ಹಲವಾರು ದೇಶಗಳು ತಪ್ಪು ದಿಕ್ಕಿನಲ್ಲಿ ಸಾಗುತ್ತಿವೆ ಮತ್ತು ಕೆಲವರು ಸೋಂಕನ್ನು ನಿಗ್ರಹಿಸಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದರು.
ಅದೇ ಸಮಯದಲ್ಲಿ, ನಿರ್ಬಂಧಗಳನ್ನು ಹೇರುವ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಗಳು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವುದು ಎಷ್ಟು ಕಷ್ಟ ಎಂದು ಟೆಡ್ರೊಸ್ ಒಪ್ಪಿಕೊಂಡರು.
ಭಾನುವಾರ 24 ಗಂಟೆಗಳ ಅವಧಿಯಲ್ಲಿ 230,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 80% ರಷ್ಟು ಮಂದಿ 10 ದೇಶದವರಾಗಿದ್ದಾರೆ. ಅರ್ಧಕ್ಕಿಂತ ಹೆಚ್ಚು ಮಂದಿ ಅಮೆರಿಕ ಹಾಗೂ ಬ್ರೆಜಿಲ್ನವರಾಗಿದ್ದಾರೆ.
ಅನೇಕ ದೇಶಗಳು ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಶಾಲೆಗಳನ್ನು ಆರಂಭ ಮಾಡಿದ್ದಾರೆ. ಕೆಲವು ರಾಷ್ಟ್ರಗಳು ಯಾವುದೇ ಕ್ರಮಗಳ{ನ್ನು ಕೈಗೊಳ್ಳದೇ ಶಾಲೆಗಳನ್ನು ಮುನಃ ತೆರೆಯುವಂತೆ ಕರೆ ನೀಡುವ ಮೂಲಕ ರಾಜಕೀಯ ಫುಟ್ಬಾಲ್ ಆಡುತ್ತಿವೆ ಎಂದರು. ಸದ್ಯದಲ್ಲಿ ಸಾಮಾನ್ಯ ಸ್ಥಿತಿಗೆ ಮರಳಲು ಸಾಧ್ಯವಿಲ್ಲ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ, ಆಗಾಗ ಕೈತೊಳೆದುಕೊಳ್ಳಿ, ಮನೆಯಲ್ಲಿ ಇರಿ ಎಂದು ಹೇಳಿದರು.
ಅಮೆರಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶಾಲೆಗಳನ್ನು ತೆರೆಯುವಂತೆ ಅಮೆರಿಕದ ಶಿಕ್ಷಣ ಸಂಸ್ಥೆಗಳಿಗೆ ಒತ್ತಡ ಹೇರಿದ್ದು, ಶಾಲೆಗಳನ್ನು ತೆರಯದಿದ್ದಲ್ಲಿ ಹಣವನ್ನು ಆರ್ಥಿಕ ನೆರವನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.