ಸಿಂಗಾಪುರ, ಜು 14 (DaijiworldNews/PY): ಕೊರೊನಾ ನಿಯಂತ್ರಿಸಲು ಜಾರಿ ಮಾಡಲಾಗಿದ್ದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಿಂಗಾಪುರದಿಂದ 10 ಮಂದಿ ಭಾರತೀಯರನ್ನು ಗಡಿಪಾರು ಮಾಡಿದ್ದು, ಮತ್ತೆ ಸಿಂಗಾಪುರಕ್ಕೆ ಬರುವುದನ್ನು ಖಾಯಂ ಆಗಿ ನಿಷೇಧ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ರೀತಿ ಮಾಡಿದ ಕಾರಣ ಇದು ಸಿಂಗಾಪುರದಲ್ಲಿ ಜಾರಿ ಮಾಡಲಾಗಿದ್ದ ನಿಯಮವನ್ನು ಉಲ್ಲಂಘನೆ ಮಾಡಿದಂತಾಗಿದೆ. ಈ ಕಾರಣದಿಂದ ಹತ್ತು ಮಂದಿ ಭಾರತೀಯರನ್ನು ಗಡಿಪಾರು ಮಾಡಲಾಗಿದೆ. ಕೊರೊನಾ ನಿಯಮವನ್ನು ಉಲ್ಲಂಘನೆ ಮಾಡಿದ್ದರಿಂದ ಆರು ತಿಂಗಳುಗಳ ಕಾಲ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಇದು ಎರಡನೇ ಬಾರಿ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಒಂದು ವರ್ಷ ಜೈಲು ಶಿಕ್ಷೆಗೆ ಒಳಗಾಗಬಹುದಾಗಿದೆ.
10 ಭಾರತೀಯರನ್ನು ಗಡಿಪಾರು ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಅವರ ಪಾಸ್ಗಳನ್ನು ರದ್ದು ಮಾಡಲಾಗಿದೆ. ಅವರನ್ನು ಕೂಡಲೇ ಭಾರತಕ್ಕೆ ಕಳುಹಿಸಲಾಗುತ್ತದೆ ಎಂದು ಸಿಂಗಾಪುರದ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಿಯಮ ಕೇವಲ ಭಾರತೀಯರಿಗೆ ಮಾತ್ರವಲ್ಲದೇ, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳ ನಾಗರೀಕರಿಗೆ ಇದೇ ರೀತಿಯಾದ ಕ್ರಮಗಳನ್ನು ಸಿಂಗಾಪುರ ಕೈಗೊಂಡಿದೆ.
ಸಿಂಗಾಪುರದಲ್ಲಿ ಏ.7ರಿಂದ ಜೂನ್ 2 ವರೆಗೆ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಲಾಕ್ಡೌನ್ ಘೋಷಣೆಯಾಗಿತ್ತು. ಆದರೆ, ಈ ನಿಯಮವನ್ನು ಉಲ್ಲಂಘನೆ ಮಾಡಿ 10 ಮಂದಿ ಭಾರತೀಯರು ಮೇ 5ರಂದು ಅಪಾರ್ಟ್ಮೆಂಟ್ವೊಂದರಲ್ಲಿ ಒಟ್ಟುಗೂಡಿದ್ದರು ಎಂದು ಹೇಳಲಾಗಿದೆ.
ಈವರೆಗೆ ಸಿಂಗಾಪುರದಲ್ಲಿ 45 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಸೋಂಕಿನಿಂದ 26 ಮಂದಿ ಸಾವನ್ನಪ್ಪಿದ್ದಾರೆ.