ಬ್ರೆಜಿಲ್, ಜು 15 (DaijiworldNews/PY): 1800 ರ ದಶಕದ ಜನಪ್ರಿಯ ಬಿಯರ್ ಬ್ರಹ್ಮ ಹೆಸರನ್ನು ತೆಗೆದುಹಾಕಲು ವಿವಿಧ ಧರ್ಮಗಳ ಪ್ರತಿನಿಧಿಗಳ ಒಕ್ಕೂಟ ಒತ್ತಡ ಹೇರಿದೆ.
ಕ್ರಿಶ್ಚಿಯನ್, ಯಹೂದಿ, ಬೌದ್ಧ, ಹಿಂದೂ ಮತ್ತು ಜೈನ ಧರ್ಮಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಈ ಗುಂಪು, ಬೆಲ್ಜಿಯಂ ಮೂಲದ ಅನ್ಹೆಸರ್-ಬುಷ್ ಇನ್ ಬಿವ್ ಬಿಯರ್ ಹೆಸರನ್ನು ಬದಲಾಯಿಸಲು ಒತ್ತಾಯಿಸುತ್ತಿದೆ.
ಬ್ರಹ್ಮ ಬಿಯರ್ ಅನ್ನು ಮೊದಲ ಬಾರಿಗೆ 1888ರಲ್ಲಿನ ಬ್ರೆಜಿಲ್ನ ಬಿಯರ್ ತಯಾರಿಕೆ ಕಂಪಾನಿಯಾ ಸೆರ್ವೆಜರಿಯಾ ಬ್ರಹ್ಮ ತಯಾರಿಸಿತ್ತು. ಇದು ಬಡ್ವೈಸರ್, ಬಡ್ ಲೈಟ್, ಕರೋನಾ ಮತ್ತು ಸ್ಟೆಲ್ಲಾ ಅರ್ಟೊಯಿಸ್ ಸೇರಿದಂತೆ 500 ಬ್ರಾಂಡ್ಗಳಿವೆ. ಈಗ ಅನ್ಹೆಸರ್-ಬುಷ್ ಇನ್ ಬಿವ್ ಒಡೆತನದಲ್ಲಿದೆ.
ಬ್ರಹ್ಮ ಹೆಸರಿನಲ್ಲಿ ಮಾರಾಟವಾಗುವ ಬಿಯರ್ಗಳಲ್ಲಿ ಲಾಗರ್, ಡಬಲ್ ಮಾಲ್ಟ್, ಗೋಧಿ ಬಿಯರ್ ಮತ್ತು ಚಾಕೊಲೇಟ್ ಸ್ಟೌಟ್ ಮೊದಲಾದ ಬಿಯರ್ಗಳಿವೆ.
ಸುಮಾರು 132 ವರ್ಷಗಳಿಂದ ನಮ್ಮ ಹಿಂದೂ ಸಹೋದರ ಸಹೋದರಿಯರ ನಂಬಿಕೆಯನ್ನು ಘಾಸಿಗೊಳಿಸಿದ್ದು, ಹಳೆಯ ತಪ್ಪನ್ನು ಸರಿಪಡಿಸಲು ಇದು ಸರಿಯಾದ ಸಮಯ ಎಂದು ಧಾರ್ಮಿಕ ಒಕಕೂಟದ ವಕ್ತಾರ ರಾಜನ್ ಜೆಡ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.