ವಾಷಿಂಗ್ಟನ್, ಜು 17 (DaijiworldNews/PY): ಭಾರತ ಹಾಗೂ ಚೀನಾದ ನಡುವೆ ಶಾಂತಿ ಕಾಪಾಡಲು ಸಾಧ್ಯವಿರುವ ಎಲ್ಲ ರೀತಿಯಾದ ಕ್ರಮವನ್ನು ಮಾಡಲು ಬಯಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ಶ್ವೇತಭವನದ ವಕ್ತಾರ ತಿಳಿಸಿದ್ದಾರೆ.
ಟ್ರಂಪ್ ಆಡಳಿತವು ಕಳೆದ ಕೆಲವು ವಾರಗಳಿಂದ ಚೀನಾದ ವಿರುದ್ದ ಭಾರತಕ್ಕೆ ಬೆಂಬಲಿಸುತ್ತಿದೆ.
ನಾನು ಭಾರತದ ಜನರನ್ನು ಪ್ರೀತಿಸುತ್ತೇನೆ ಹಾಗೂ ಚೀನಾದ ಜನರನ್ನೂ ಪ್ರೀತಿಸುತ್ತೇನೆ. ಉಭಯ ದೇಶಗಳ ನಡುವೆ ಶಾಂತಿ ಕಾಪಾಡಲು ನಾನು ಎಲ್ಲವನ್ನು ಮಾಡಲು ಬಯಸುತ್ತೇನೆ ಎಂದು ಟ್ರಂಪ್ ಹೇಳಿರುವುದಾಗಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಧ್ಯಕ್ಷ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಉತ್ತಮ ಸ್ನೇಹಿತ ಎಂದು ಶ್ವೇತಭವನದ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ ಅವರು ಹೇಳಿದ್ದಾರೆ.
ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರು ಭಾರತವು ಅಮೆರಿಕದೊಂದಿಗೆ ಉತ್ತಮ ಪಾಲುದಾರಿಕೆ ಹೊಂದಿದೆ ಎಂದಿದ್ದರು.